ಮಡಿಕೇರಿ ಮೇ 27 : ಗೊಬ್ಬರ ಚೀಲ ಮುಚ್ಚಿಕೊಂಡು ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ.
ಮರಗೋಡುವಿನಲ್ಲಿ ಗೊಬ್ಬರ ಚೀಲ ಮುಚ್ಚಿಕೊಂಡು ತೆರಳುತ್ತಿದ್ದ ಲಾರಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ಬೀಟೆ ಮರಗಳು ಇರುವುದು ಪತ್ತೆಯಾಗಿದೆ. ಸುಮಾರು 2 ಲಕ್ಷ ರೂ. ಮೌಲ್ಯದ ಮರ, ಲಾರಿ ಸೇರಿ ಒಟ್ಟು 22 ಲಕ್ಷದ ರೂ. ಮೌಲ್ಯದ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭ ಲಾರಿ ಚಾಲಕ ಮತ್ತು ಆರೋಪಿಗಳು ಪರಾರಿಯಾಗಿದ್ದಾರೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಷಿನ್ ಭಾಷಾ, ವಲಯ ಅರಣ್ಯಾಧಿಕಾರಿ ಹನುಮಂತ ರಾಜು, ಮೂರ್ನಾಡು ಉಪ ವಲಯದ ಉಪವಲಯ ಅರಣ್ಯಾಧಿಕಾರಿ ಬಿ.ಹೆಚ್.ಸಚಿನ್ ಸೇರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.