ನಾಪೋಕ್ಲು ಮೇ 29 : ಕಕ್ಕಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಕಕ್ಕಬೆಯಲ್ಲಿ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯು ಕೃಷಿ ಪತ್ತಿನ ಸಹಕಾರ ಸಂಘದ ಎದುರು ಇರುವ ಹೊಳೆಯಲ್ಲಿ ನಡೆಯಿತು.
ವಿವಿಧ ವಯೋಮಾನದವರಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳ ಬಾಲಕ, ಬಾಲಕಿಯರು, ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಕಾವೇರಪ್ಪ ಮಾತನಾಡಿ, ರಿವರ್ ಸ್ವಿಮಿಂಗ್ ಕ್ಲಬ್ ನ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ನೇತೃತ್ವದಲ್ಲಿ ಕಕ್ಕಬೆ ಹೊಳೆಯಲ್ಲಿ ವಿಶೇಷವಾದ ಈಜು ಸ್ಪರ್ಧೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮೀಣ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ನೀಡುವಂತಾಗಲು ಯುವ ಜನಾಂಗ ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಬೇಸಿಗೆಯ ರಜೆ ಸದುಪಯೋಗ ಆಗುವಂತಹ ಉತ್ತಮ ಕಾರ್ಯಕ್ರಮಗಳನ್ನು ಮಕ್ಕಳಿಗೆ ಆಯೋಜಿಸಲಾಗಿದೆ ಎಂದರು.
ಮಾಚಿಮಾಡ ರವೀಂದ್ರ ಮಾತನಾಡಿ, ಈಜು ಸ್ಪರ್ಧೆ ಕೊಡಗಿಗೆ ಹೊಸ ಅನುಭವ ತಂದಿದೆ. ಜಿಲ್ಲೆಯಲ್ಲಿನ ಪ್ರಕೃತಿಯನ್ನು ಆರಾಧಿಸುವ ಮಾನಸಿಕತೆಯನ್ನು ಇಂತಹ ಸ್ಪರ್ಧೆಗಳು ಬೆಳೆಸುತ್ತಿವೆ. ಪರಿಸರದ ಬಗ್ಗೆ ಕಾಳಜಿ ಬಳಸಲು ಕೂಡ ಇದು ಸಹಕಾರಿಯಾಗಿದೆ ಎಂದರು.
ಕಕ್ಕಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮಾತನಾಡಿ, ಕಕ್ಕಬ್ಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ 2018ರಲ್ಲಿ ರಾಷ್ಟ್ರದಲ್ಲೇ ಪ್ರಥಮ ಎಂಬಂತೆ ರಿವರ್ ಸ್ವಿಮ್ಮಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ರಾಜ್ಯ ಹಾಗೂ ಇತರ ಭಾಗಗಳಿಂದ ನೂರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎರಡನೇ ವರ್ಷದ ಸ್ಪರ್ಧೆ 2022 ರಲ್ಲಿ ನಡೆಯಿತು. ಇದರಲ್ಲಿ 125 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು ಇದೀಗ ಮೂರನೇ ವರ್ಷದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಗ್ರಾಮೀಣ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಭಾಗಗಳ 80 ಸ್ಪರ್ಧಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಗೋಣಿಕೊಪ್ಪ ಅತ್ತೂರಿನ ನ್ಯಾಷನಲ್ ಅಕಾಡೆಮಿ ಸ್ಕೂಲ್ ಅಧ್ಯಕ್ಷೆ ನೆರವಂಡ ಶಾಂತಿ ಅಚ್ಚಪ್ಪ ಮಾತನಾಡಿದರು. ಕಾಫಿ ಬೆಳೆಗಾರರಾದ ಪಾಡೆಯಂಡ ಗಣೇಶ್, ಪಾಂಡಂಡ ನರೇಶ್, ಮಾದ0ಡ ಉಮೇಶ್ ಬಿದ್ದಪ್ಪ, ಬಾಚಮಂಡ ಪ್ರಿಯ ಭರತ್, ವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಹಾಗೂ ರಾಜ್ಯದ ವಿವಿಧ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು. ಬೊಳಿಯಾಡಿರ ಸಂತು ಸುಬ್ರಮಣಿ ಸ್ವಾಗತಿಸಿ ಕುಲ್ಲೇಟಿರ ಅರುಣ್ ಬೇಬ ಮತ್ತು ಮಾದಂಡ ದಿಯಾ ಬಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಅತಿಥಿಗಳು ಕಕ್ಕಬ್ಬೆ ಹೊಳೆಗೆ ಪುಷ್ಪ ಸಿಂಚನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಕ್ಕಬ್ಬೆ ಹೊಳೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿತ್ತು. ಬೆಟ್ಟದಿಂದ ಹರಿದು ಬರುವ ನೀರಿನಲ್ಲಿ ವಿವಿಧ ಭಾಗಗಳ ಸ್ಪರ್ಧಿಗಳು ಪಾಲ್ಗೊಂಡು ಈಜಿ ಸಂಭ್ರಮಿಸಿದರು.
ಮಕ್ಕಳು, ಯುವಕರು, ಯುವತಿಯರು ಪಾಲ್ಗೊಂಡ ಸ್ಪರ್ಧೆ ವೀಕ್ಷಕರ ಮನರಂಜಿಸಿತು.
ಈಜು ಸ್ಪರ್ಧೆ ವಿಜೇತರು :: ಮುಕ್ತ 800 ಮೀಟರ್ – ಸ್ಟೀವ್ ಜಫ್ ಲೋಬೋ ಪ್ರಥಮ, ಯಶ್ ಕಾರ್ಯಪ್ಪ ದ್ವಿತೀಯ, ಜಮಿತ್ ಬೋಪಣ್ಣ ತೃತೀಯ
45 – 800 ಮೀಟರ್ – ಮುತ್ತು ಕೃಷ್ಣನ್ ಪ್ರಥಮ, 15 ವರ್ಷದೊಳಗಿನ ಬಾಲಕರು- 400 ಮೀಟರ್ – ರಾಹುಲ್ ಎಸ್ ಪ್ರಥಮ, ಯಶ್ ಕಾರ್ಯಪ್ಪ ದ್ವಿತೀಯ, ನಿಶಾಂತ್ ಗೌಡ ತೃತೀಯ.
400 ಮೀಟರ್ ಮುಕ್ತ – ಸ್ಟೀವ್ ಜಫ್ ಲೋಬೋ ಪ್ರಥಮ, ಆರ್ಯನ್ ಶಂಕರ್ ಮಿತಿ ದ್ವಿತೀಯ, ಸೋಮೇಶ್ ತೃತೀಯ.
15 ವರ್ಷದೊಳಗಿನ ಬಾಲಕರು -200 ಮೀಟರ್ – ರಾಹುಲ್ ಎಸ್ ಪ್ರಥಮ, ಯಶ್ ಕಾರ್ಯಪ್ಪ ದ್ವಿತೀಯ, ಶ್ರೇಯಾಂಕ ಪಿ ತೃತೀಯ
15 ವರ್ಷದೊಳಗಿನ ಬಾಲಕಿಯರು -200 ಮೀಟರ್ – ಶಿವಾನಿ ಪ್ರಥಮ,
ಹತ್ತು ವರ್ಷದೊಳಗಿನ ಬಾಲಕರು -200 ಮೀಟರ್ – ಜನಿತ್ ಬೋಪಣ್ಣ ಪ್ರಥಮ, ಅರ್ಜುನ್ ಸುಬ್ಬಯ್ಯ ದ್ವಿತೀಯ,
15 ವರ್ಷದೊಳಗಿನ ಬಾಲಕರು- 100 ಮೀಟರ್ – ಯಶ್ ಕಾರ್ಯಪ್ಪ ಪ್ರಥಮ, ಶ್ರೀಹರಿ ದ್ವಿತೀಯ, ಶ್ರೇಯಾಂಕ ಪಿ ತೃತೀಯ
21- 25 ವಯೋಮಾನದವರು- 200 ಮೀಟರ್ – ಮಹದೇವ ಪ್ರಸಾದ್ ಎಸ್ ಪ್ರಥಮ
ಹತ್ತು ವರ್ಷದೊಳಗಿನ ಬಾಲಕರು -100 ಮೀಟರ್ – ಜಮಿತ್ ಬೋಪಣ್ಣ ಪ್ರಥಮ, ಅರ್ಜುನ್ ಸುಬ್ಬಯ್ಯ ದ್ವಿತೀಯ, ದನಿಯ ತೃತೀಯ
15 ವರ್ಷದೊಳಗಿನ ಬಾಲಕಿಯರು 100 ಮೀಟರ್ – ಶಿವಾನಿ ಎಂ ಸಿ ಪ್ರಥಮ, ಕಶ್ಮಿ ಕಾವೇರಮ್ಮ ದ್ವಿತೀಯ, ಶಿಯಾನ್ ತೃತೀಯ
ಹತ್ತು ವರ್ಷದೊಳಗಿನ ಬಾಲಕಿಯರು -100 ಮೀಟರ್ – ಚೈತ್ರ ಎಲ್ ಪ್ರಥಮ, ದಾನಿ ದ್ವಿತೀಯ
15 ವರ್ಷದೊಳಗಿನ ಬಾಲಕರು-50 ಮೀಟರ್ – ರಾಹುಲ್ ಎಸ್ ಪ್ರಥಮ, ಶ್ರೀಹರಿ ದ್ವಿತೀಯ, ನಿಶಾಂತ್ ಗೌಡ ತೃತೀಯ
15 ವರ್ಷದೊಳಗಿನ ಬಾಲಕಿಯರು- 50 ಮೀಟರ್ – ಕಶ್ಮಿ ಕಾವೇರಮ್ಮ ಪ್ರಥಮ, ಶಿಯಾ ದ್ವಿತೀಯ
ಹತ್ತು ವರ್ಷದೊಳಗಿನ ಬಾಲಕರು -50 ಮೀಟರ್ – ಜನಿತ್ ಗೋಪಣ್ಣ ಪ್ರಥಮ, ಅರ್ಜುನ್ ಸುಬ್ಬಯ್ಯ ದ್ವಿತೀಯ, ದ್ರೋನಿನ್ ದೇವಯ್ಯ ತೃತೀಯ
ಹತ್ತು ವರ್ಷದೊಳಗಿನ ಬಾಲಕಿಯರು- 50 ಮೀಟರ್ – ಚಿತ್ರ ಎಲ್ ಪ್ರಥಮ, ಶ್ರೇಯಾ ಅಯ್ಯಪ್ಪ ದ್ವಿತೀಯ,
15 ವರ್ಷದೊಳಗಿನವರು- 30 ಮೀಟರ್ – ಧೀಮಂತ್ ಪ್ರಥಮ, ಕೀರ್ತನ್ ಚರ್ಮಣ ದ್ವಿತೀಯ, ನಂಜಪ್ಪ ತೃತೀಯ
ಹತ್ತು ವರ್ಷದೊಳಗಿನ ಬಾಲಕರು- 30 ಮೀಟರ್ – ಅರ್ಜುನ್ ಪ್ರಥಮ, ಧೃನಿನ್ ದ್ವಿತೀಯ, ಕಾರ್ಯಪ್ಪ-ತೃತೀಯ
15 ವರ್ಷದೊಳಗಿನ ಬಾಲಕಿಯರು -30 ಮೀಟರ್ – ಶಿವಾನಿ ಪ್ರಥಮ, ಶಿಯಾ ದ್ವಿತೀಯ,
ಹತ್ತು ವರ್ಷದೊಳಗಿನ ಬಾಲಕಿಯರು- 30 ಮೀಟರ್ – ದಾನಿ ಪ್ರಥಮ, ಅದಿತಿ ದ್ವಿತೀಯ,
ಎಂಟು ವರ್ಷದೊಳಗಿನವರು – ಇಶಾನಿ ಪ್ರಥಮ, ತಾನ ಅಕ್ಕಮ್ಮ ದ್ವಿತೀಯ, ಲೆನಿತ್ ತೃತೀಯ
ವಿಜೇತರರಿಗೆ ಆಕರ್ಷಕ ಟ್ರೋಫಿ ಮತ್ತು ನಗದನ್ನು ಅತಿಥಿಗಳು ವಿತರಿಸಿ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ