ಮಡಿಕೇರಿ ಜೂ.1 : ಕಡಂಗ ವಿಜಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಪುನರಾರಂಭ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂಗುಚ್ಚ, ಸಿಹಿ ನೀಡಿ ಬರಮಾಡಿಕೊಂಡರು.
ಈ ಸಂದರ್ಭ ಶಾಲೆಯ ಅಧ್ಯಕ್ಷರು ಮಾತನಾಡಿ ವಿದ್ಯಾರ್ಥಿಗಳ ಶಾಲೆಯಿಂದ ಪ್ರಮಾಣಿಕತೆ, ಸಮಗ್ರತೆ, ಉತ್ತಮ ನಡವಳಿಕೆಗಳನ್ನು ಕಲಿತು ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಲಹೆ ನೀಡಿದರು.










