ನಾಪೋಕ್ಲು ಜೂ.2 : ಲಯನ್ಸ್ ಕ್ಲಬ್ ವತಿಯಿಂದ ನಾಪೋಕ್ಲು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಪ್ರಾಂತೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕೆ.ಪಿ.ಲಯನ್ ಸುಬ್ರಹ್ಮಣಿ ಮತ್ತು ಕಿರಣ್ ಚಂಗಪ್ಪ ಪ್ರಥಮ ಸ್ಥಾನ ಗಳಿಸಿದರು.
ದ್ವಿತೀಯ ಸ್ಥಾನವನ್ನು ಲಯನ್ ಬಾಚಮಂಡ ಅಪ್ಪಣ್ಣ ಮತ್ತು ಮಾದೆಯಂಡ ಕುಟ್ಟಪ್ಪ ಗಳಿಸಿದರು. ವಿಜೇತರಿಗೆ ಟ್ರೋಫಿದಾನಿಗಳಾದ ಅಪ್ಪಚೆಟ್ಟೋಳಂಡ ಪಿ ವಸಂತ ಮತ್ತು ಕನ್ನಂಬೀರ ಸುಧಿ ತಿಮ್ಮಯ್ಯ ಹಾಗೂ ಶಿವಚಾಳಿಯಂಡ ಕಾಳಪ್ಪ ನೀಡಿದ ಟ್ರೋಫಿಯನ್ನು ವಿತರಿಸಲಾಯಿತು.
ಮಿಕ್ಸೆಡ್ ಡಬಲ್ಸ್ ನಲ್ಲಿ ಲಯನ್ ಪೆಮ್ಮುಡಿಯಂಡ ಅಪ್ಪಣ್ಣ ಮತ್ತು ಇಂದಿರಾ ಅಪ್ಪಣ್ಣ ಪ್ರಶಸ್ತಿ ಗಳಿಸಿದರು.ಇವರಿಗೆ ಲಯನ್ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ ನೀಡಿದ ಟ್ರೋಫಿಯನ್ನು ವಿತರಿಸಲಾಯಿತು.
ಮಹಿಳೆಯರ ವಿಭಾಗದಲ್ಲಿ ಲಯನ್ ವಿದ್ಯಾ ವಿಶಾಲ್ ಹಾಗೂ ಮಾನ್ಯ ಕಾಳಪ್ಪ ಪ್ರಥಮ ಸ್ಥಾನ ಗಳಿಸಿದರು. ಇಂದಿರಾ ಅಪ್ಪಣ್ಣ ಮತ್ತು ಶುಭ ದ್ವಿತೀಯ ಸ್ಥಾನ ಗಳಿಸಿದರು ಇವರಿಗೆ ಬಿದ್ದಾಟಂಡ ಮೇರಿ ಚಿಟಿಯಪ್ಪ ಹಾಗೂ ಚಿಟಿಯಪ್ಪ ನೀಡಿದ ಟ್ರೋಫಿಯನ್ನು ವಿತರಿಸಲಾಯಿತು.
ನಾಪೋಕ್ಲು ಲಯನ್ಸ್ ಕ್ಲಬ್ ಗೆ ವಲಯ ಅಧ್ಯಕ್ಷ ಮುಕ್ಕಾಟಿರ ಎಂ.ವಿನಯ್ ಅಧಿಕೃತ ಭೇಟಿ ನೀಡಿದ ಸಂದರ್ಭ ವಿಜೇತರಿಗೆ ಟ್ರೋಫಿ ವಿತರಿಸಲಾಯಿತು.
ವಲಯಾಧ್ಯಕ್ಷ ಎಂ.ಎಂ ವಿನಯ್ ಮಾತನಾಡಿ, ಕ್ಲಬ್ ನ ಕಾರ್ಯ ಚಟುವಟಿಕೆಗ ಮೆಚ್ಚುಗೆ ವ್ಯಕ್ತಪಡಿಸಿ ಕ್ಲಬ್ ನ ಧ್ಯೇಯೋದ್ದೇಶ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಂ.ಮುತ್ತಪ್ಪ ವಹಿಸಿದ್ದ ಧ್ವಜ ವಂದನೆಯನ್ನು ಡಾ. ಕೆ.ಪಂಚಮ್ ತಿಮ್ಮಯ್ಯ ನೆರವೇರಿಸಿದರು.
ಈ ಸಂದರ್ಭ ಕೋಶಾಧಿಕಾರಿ ಎಂ.ಬಿ ಕುಟ್ಟಪ್ಪ, ವಿವಿಧ ಕ್ಲಬ್ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ನೂತನ ಸದಸ್ಯರಾದ ಬೊಪ್ಪೆರ ಕೆ. ಜಯ ಉತ್ತಪ್ಪ ಪದಗ್ರಹಣ ಮಾಡಿ ಕಾಂಡಂಡ ರೇಖಾ ಪೊನ್ನಣ್ಣ ಪ್ರಾರ್ಥಿಸಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಎಂ ಉತ್ತಪ್ಪ ಸ್ವಾಗತಿಸಿದರು. ಕೆ.ಸಿ ತಿಮ್ಮಯ್ಯ ವಂದಿಸಿದರು.
ವರದಿ : ದುಗ್ಗಳ ಸದಾನಂದ