ಮಡಿಕೇರಿ ಜೂ.2 : ಜಿಲ್ಲೆಯ ಹೊಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಅರೆಕಾಡು, ನೇತಾಜಿ ನಗರಕ್ಕೆ ಕಳೆದ ಒಂದು ವಾರದಿಂದ ಸೆಸ್ಕ್ ನಿಂದ ಅಳವಡಿಸಲಾದ ಟಿಸಿ ಚಾರ್ಚ್ ಮಾಡಲು ವಿಳಂಭವಾದ ಕಾರಣ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾ.ಪಂ.ಪಿಡಿಒತಿಳಿಸಿದ್ದಾರೆ.
ಸದ್ಯ ಸ್ಥಳೀಯ ವ್ಯಾಪ್ತಿಯಲ್ಲಿ ಮತ್ತೊಂದು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ ಎಂದು ಗ್ರಾ.ಪಂ.ಅಧಿಕಾರಿ ಹಾಗೂ ಸೆಸ್ಕ್ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.