ವಿರಾಜಪೇಟೆ ಜೂ.6 : ನಗರದ ಮದರ್ ತೆರೇಸಾ ಸೇವಾ ಕೇಂದ್ರ ವತಿಯಿಂದ ವಿರಾಜಪೇಟೆಯ ಸಂತ ಅನ್ನಮ್ಮ ಧರ್ಮ ಕೇಂದ್ರದ ಆಯ್ದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಂದನೀಯ ಗುರು ಐಸಾಕ್ ರತ್ನಾಕರ್, ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಅಂಕಗಳನ್ನ ಪಡೆಯುವಂತೆ ನುಡಿದರಲ್ಲದೆ ಮದರ್ ತೆರೇಸಾ ಸೇವಾಕೇಂದ್ರದ ಸೇವಾ ಕಾರ್ಯಗಳನ್ನ ಶ್ಲಾಘೀಸಿದರಲ್ಲದೇ, ರೂ.10,000 ದೇಣಿಗೆಯನ್ನು ನೀಡಿದರು.
ವಂದನೀಯ ಗುರು ಯೇಸು ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹಿತನುಡಿಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಎಸ್ ಮಚ್ಚಾಡೊ, ಸಂಸ್ಥೆ ವತಿಯಿಂದ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಜನೆಗೆ ಪುಸ್ತಕ ಹಾಗೂ ಇತರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಶಾಲೆಗೂ, ಪೋಷಕರಿಗೆ ಕೀರ್ತಿ ತರುವಂತಾಗಬೇಕು. ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ಸಾದ್ಯವಾದ ಮಟ್ಟಿಗೆ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರಲಾಗುವುದು. ಪ್ರತಿಯೋರ್ವ ವಿದ್ಯಾರ್ಥಿಗಳಿಗೆ ವಿದ್ಯೇಯೊಂದಿಗೆ ವಿನಯವೂ ಮುಖ್ಯ. ಜೊತೆಗೆ ಶಾಲಾ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಮದರ್ ತೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್, ಸದಸ್ಯರಾದ ಜಾನಿ ಮೆನೆಜೆಸ್, ರ್ಚಾಲ್ರ್ಸ್ ಡಿಸೋಜಾ, ಇಂದಿರಾ ಅಲ್ಫೋನ್ ಸಾ, ಅನಿತಾ ನರೋನ್ಹ, ಅರುಣ ಡಿಸೋಜಾ, ಚೋಪಿ ಜೋಸೆಫ್, ಜೋಕಿಮ್ ರೋಡ್ರಿಗಸ್, ಮರ್ವಿನ್ ಲೋಬೊ ಪುರಸಭೆ ಸದಸ್ಯ ಬೆನ್ನಿ ಅಗಸ್ಟಿನ್ ಹಾಜರಿದ್ದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಿದರು.
ಸುಮಾರು 80 ವಿದ್ಯಾರ್ಥಿಗಳಿಗೆ ರೂ.750 ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.
ಖಜಾಂಚಿ ಜೇಮ್ಸ್, ಹಾಗೂ ಸದಸ್ಯರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
Breaking News
- *ಲಾರಿ ಡಿಕ್ಕಿಯಾಗಿ ಬಾಲಕಿ ಸಾವು*
- *ಅದವಿಯಾಗೆ ಅಭಿನಂದನೆ*
- *ನಿಧನ ಸುದ್ದಿ*
- *ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ಸುಪ್ರೀಂ ಕೋರ್ಟಲ್ಲಿ ವಜಾ*
- *ಕಾರಾಗೃಹ ವಾರ್ಡನ್ ಹುದ್ದೆಗೆ ಆಹ್ವಾನ*
- *ವೀರ ಸೇನಾನಿಗಳಿಗೆ ಅಗೌರವ : ಕುಲಾಲ ಕುಂಬಾರ ಸಂಘ ಖಂಡನೆ*
- *ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ*
- *ಆರೋಪಿಯ ಗಡಿಪಾರಿಗೆ ಹಿಂದು ಜಾಗರಣ ವೇದಿಕೆ ಒತ್ತಾಯ*
- *ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧಾ ಕಾರ್ಯಕ್ರಮ*
- *ಸೋಮವಾರಪೇಟೆ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ*