ಮಡಿಕೇರಿ ಜೂ.6 : ಪ್ರಸಕ್ತ(2023-24) ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿಯಲ್ಲಿ ಉತ್ಪಾದನಾ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಎಲ್ಲಾ ವರ್ಗದ ಹೊಸದಾಗಿ ಸ್ವಂತ ಉದ್ಯೋಗ ಆರಂಭಿಸುವ ನಿರುದ್ಯೋಗಿ ಯುವಕ, ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35 ರವರೆಗೆ ಸಹಾಯಧನ ನೀಡಲಾಗುವುದು.
ಕಾಫಿ ಗ್ರೈಂಡಿಂಗ್, ಪ್ಲೋರ್ ಮಿಲ್, ಸಿಮೆಂಟ್ ಬ್ಲಾಕ್ಸ್, ವರ್ಮಿ ಕಾಂಪೋಸ್ಟ್, ಜೇನು ಕೃಷಿ, ಎಣ್ಣೆ ತಯಾರಿಕೆ, ರಬ್ಬರ್, ಪಶು ಆಹಾರ, ಜ್ಯೂಸ್ ತಯಾರಿಕೆ, ರೆಡಿಮೇಡ್ ಗಾರ್ಮೇಂಟ್ಸ್, ಫ್ಲಕ್ಸ್ ಅಂಡ್ ಪ್ರಿಂಟಿಂಗ್ ಪ್ರೆಸ್, ಬ್ಯೂಟಿ ಪಾರ್ಲರ್, ಸಲೂನ್, ಎಕ್ಸ್-ರೇ ಸ್ಕ್ಯಾನಿಂಗ್, ಮೆಡಿಕಲ್, ಲ್ಯಾಬ್, ಡೆಂಟಲ್ ಲ್ಯಾಬ್, ಅಡಿಕೆ ಮತ್ತು ಪೇಪರ್ ಪ್ಲೇಟ್ಸ್, ಶಾಮಿಯಾನ, ಸೆಂಟ್ರಿಂಗ್ ವಕ್ರ್ಸ್, ಎಂಜಿನಿಯರಿಂಗ್ ವಕ್ರ್ಸ್, ವೆಲ್ಡಿಂಗ್, ವಾಟರ್ ಸರ್ವೀಸ್ ಸ್ಟೇಷನ್, ಹಸು, ಕುರಿ, ಮೇಕೆ, ಎಮ್ಮೆ, ಕೋಳಿ, ಬಾತು ಕೋಳಿ, ಟರ್ಕಿ ಕೋಳಿ, ಮೀನು ಸಾಕಾಣಿಕೆ ಹಾಗೂ ಮಾಂಸಹಾರಿ ಹೋಟೆಲ್ ಮತ್ತು ಇತರೆ 630 ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲ ಸಹಾಯಧನ ನೀಡಲಾಗುವುದು.
ಈ ಸೌಲಭ್ಯವನ್ನು ಪಡೆಯಲು ಆನ್‍ಲೈನ್ ಮೂಲಕ www.kvie.org.in (ಪಿಎಂಇಜಿಪಿ ಆನ್‍ಲೈನ್ ಅಪ್ಲಿಕೇಶನ್) ನಲ್ಲಿ ಅರ್ಜಿ ಸಲ್ಲಿಸುವಾಗ (ಏಜೆನ್ಸಿ ಕೋಡ್) ಕೆವಿಐಬಿ ಎಂದು ಅರ್ಜಿಯಲ್ಲಿ ಅಳವಡಿಸಿ ಅದರ ಪ್ರತಿಯೊಂದಿಗೆ 2 ಸೆಟ್‍ನಲ್ಲಿ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಎಚ್.ಆರ್.ರಾಮಕೃಷ್ಣ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ ಮಡಿಕೇರಿ, ಕೊಡಗು ಜಿಲ್ಲೆ ಇವರ ಕಚೇರಿ ಹಾಗೂ ದೂ.ಸಂ.08272-225946, 9480825630 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎಚ್.ಆರ್.ರಾಮಕೃಷ್ಣ ತಿಳಿಸಿದ್ದಾರೆ.
Breaking News
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*