ಮಡಿಕೇರಿ ಜೂ.6 : ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕೂಟುಹೊಳೆ ಜಾಕ್‍ವೆಲ್‍ನಲ್ಲಿರುವ 300 ಎಚ್.ಪಿಯ ಪಂಪು ಮತ್ತು ಮೋಟಾರು ತಾಂತ್ರಿಕ ದೋಷಗಳು ಮತ್ತು ವಿದ್ಯುತ್ ವ್ಯತ್ಯಯದಿಂದ ಅನಿವಾರ್ಯವಾಗಿ ದುರಸ್ತಿಯಾಗಿದೆ. ಈ ಸಂಬಂಧ ಮೋಟಾರನ್ನು ಸರಿಪಡಿಸಲು ಮೈಸೂರಿಗೆ ಕಳುಹಿಸಲಾಗಿದೆ.
ಮೋಟಾರನ್ನು ಸರಿಪಡಿಸಿ ಅಳವಡಿಸಲು ಕನಿಷ್ಠ ಎರಡು ದಿನಗಳ ಕಾಲವಕಾಶಬೇಕಿದ್ದು, ಈ ಹಿನ್ನೆಲೆಯಲ್ಲಿ ಎರಡು ದಿನಗಳು ಕುಡಿಯುವ ನೀರು ಸರಬರಾಜು ಇರುವುದಿಲ್ಲ. ಆದರೆ 90 ಎಚ್.ಪಿ.ಪಂಪ್ ಮೋಟಾರ್‍ನಿಂದ ನೀರು ಸರಬರಾಜು ಆಗುತ್ತಿದ್ದು, ಇದರೊಂದಿಗೆ ಕೈಪಂಪು ಮತ್ತು ಕೊಳವೆ ಬಾವಿಗಳಿಂದ ಬರುವ ನೀರನ್ನು ಮಿತವಾಗಿ ಬಳಸಿಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಮತ್ತು ಪೌರಾಯುಕ್ತ ವಿಜಯ ತಿಳಿಸಿದ್ದಾರೆ.









