ಮಡಿಕೇರಿ ಜೂ.6 : ಕೊಡಗು ಜಿಲ್ಲೆ ಸನ್ನದ್ದ ಕಾರ್ಯಕರ್ತರ ಸಂಗಮ ಜಿ ಟೀಮ್ ಕಾರ್ಯಾಗಾರ ನೆಲ್ಯಾಹುದಿಕೇರಿಯ ದಾರುನ್ನಜಾತ್ ಸುನ್ನಿ ಸೆಂಟರಿನಲ್ಲಿ ನಡೆಯಿತು.
ಸುನ್ನಿ ವಿದ್ಯಾರ್ಥಿ ಸಂಘಟನೆ ಎಸ್‍ಎಸ್‍ಎಫ್ ನ 50ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ “ನಾವು ಭಾರತೀಯರು ಎಂಬ ಘೋಷಣೆಯೊಂದಿಗೆ ಕರ್ನಾಟಕ ವಿದ್ಯಾರ್ಥಿ ಸಮ್ಮೇಳನ ಗೋಲ್ಡನ್ ಫಿಫ್ಟಿ” ಐತಿಹಾಸಿಕ ಸಮ್ಮೇಳನ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದ್ದು, ಇದರ ಭಾಗವಾಗಿ ಕಾರ್ಯಾಗಾರ ನಡೆಯಿತು.
ಜಿಲ್ಲಾಧ್ಯಕ್ಷರಾದ ಝುಬೈರ್ ಸಅದಿ ಉಸ್ತಾದರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಹಾಗೂ ಕೇರಳ ರಾಜ್ಯದ ಎಸ್‍ಎಸ್‍ಎಫ್ ಮಾಜಿ ಪ್ರಧಾನ ಕಾರ್ಯದರ್ಶಿ ರಷೀದ್ ಮಾಷ್ಟರ್ ನರಿಕ್ಕೋಡ್ ತರಗತಿ ನಡೆಸಿದರು.
ಎಸ್‍ಎಸ್‍ಎಫ್ ಕಳೆದ 50 ವರ್ಷದಲ್ಲಿ ಸಾಗಿ ಬಂದ ಹಾದಿಯನ್ನು ವಿವರಿಸಿದ ರಷೀದ್ ಮಾಸ್ಟರ್ ಗೋಲ್ಡನ್ ಫಿಫ್ಟಿ ಸಮ್ಮೇಳನ ಯಶಸ್ಸಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ನಾಯಕರಾದ ರಷೀದ್ ಮಾಸ್ಟರ್ ಮಡಂತ್ಯಾರ್, ಕಮರುದ್ದೀನ್ ಅನ್ವಾರಿ ಸಖಾಫಿ, ಇಬ್ರಾಹಿಂ ಮಾಸ್ಟರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಶಿಹಾಬ್ ಹಿಮಮಿ ಹಾಗೂ ಜಿಲ್ಲಾ ನಾಯಕರು ಹಾಜರಿದ್ದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ 200ರಷ್ಟು ಕಾರ್ಯಕರ್ತರು ಭಾಗವಹಿಸಿದ್ದರು.
ಜಿಲ್ಲಾಕ್ಯೂಡಿ ಕನ್ವೀನರ್ ಹುಸೈನ್ ಬಾದುಶಾ ಸಖಾಫಿ ಸ್ವಾಗತಿಸಿ, ಕಾರ್ಯದರ್ಶಿ ಶಾಫಿ ಕುಂಜಿಲ ವಂದಿಸಿದರು.
ವರದಿ : ನೌಫಲ್ ಕಡಂಗ