ಮಡಿಕೇರಿ ಜೂ.8 : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆನಂದಪುರ ಟಾಟಾ ಕಾಫಿ ಎಸ್ಟೇಟ್ ಸಿಬ್ಬಂದಿಗಳಿಂದ ಸ್ವಚ್ಛತಾ ಶ್ರಮದಾನ ನಡೆಯಿತು.
ತೋಟದ ಹಿರಿಯ ವ್ಯವಸ್ಥಾಪಕ ಎಲ್. ವಿನಯ್ ಅವರ ನೇತೃತ್ವದಲ್ಲಿ ದುಬಾರೆ ಸಮೀಪ ಇರುವ ಕಾವೇರಿ ನದಿಯ ದಡದಲ್ಲಿದ್ದ ಪ್ಲಾಸ್ಟಿಕ್, ಗಾಜಿನ ಬ್ಯಾಟಲ್ ಹಾಗೂ ಕಾಗದ ಚೂರುಗಳನ್ನು ಸ್ವಚ್ಛಗೊಳಿಸಿ ಬೇರೆಡೆ ಕಸವನ್ನು ವಿಲೇವಾರಿ ಮಾಡಲಾಯಿತು.
ನಂತರ ಆನಂದಪುರ ವಿಭಾಗದಿಂದ ಇಂಜಿಲಗೆರೆಯ ವರೆಗೂ ಒರ ರಾಜ್ಯದಿಂದ ಹಾಗೂ ಇತರೆ ಪ್ರವಾಸಿಗರು ರಸ್ತೆ ಬದಿಯಲ್ಲಿ ಎಸೆದಿರುವ ಪ್ಲಾಸ್ಟಿಕ್, ಗಾಜಿನ ಬಾಟಲಿಗಳನ್ನು ಹಾಗೂ ತ್ಯಾಜ್ಯ ವಸ್ತುಗಳನ್ನು ಬೆರ್ಪಡಿಸಿ ಸಂಗ್ರಯಿಸಿ ಅಮ್ಮತಿಯ ಗ್ರಾಮ ಪಂಚಾಯತಿಗೆ ಒಪ್ಪಿಸಲಾಯಿತು.