ಮಡಿಕೇರಿ ಜೂ.15 : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಸಿಎನ್‌ಸಿ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜೂ.14 ರಂದು ಹೈಕೋರ್ಟ್ ನಲ್ಲಿ ನಡೆಯಿತು.
ವಿಚಾರಣೆಯನ್ನು ಆ.3 ಕ್ಕೆ ಮುಂದೂಡಲಾಗಿದ್ದು, ಮುಂದಿನ 6 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಎಂಜೆ ಎಸ್ ಕಮಲ್ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.
ಡಾ.ಸುಬ್ರಮಣಿಯನ್ ಸ್ವಾಮಿ ಅವರ ಪರವಾಗಿ ನ್ಯಾಯವಾದಿ ಕಿರಣ್, ಎನ್.ಯು.ನಾಚಪ್ಪ ಅವರ ಪರ ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಹಾಗೂ ಚಿತ್ವಾನ್ ಹಾಜರಾಗಿ ಅಹವಾಲು ಸಲ್ಲಿಸಿದರು.
ಎನ್.ಯು.ನಾಚಪ್ಪ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಮಚ್ಚಾರಂಡ ಸಿಂಧು, ಶ್ರೇಯ ನಾಚಪ್ಪ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಚಂಬಂಡ ಜನತ್, ಮಂದಪಂಡ ಮನೋಜ್, ಆಲ್ಮಂಡ ಜೈ, ಬೊಳ್ಳಾರಪಂಡ ಬೋಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಪಟ್ಟಡ ರಂಜನ್, ಕಾಂಡೇರ ಸುರೇಶ್, ಪಟ್ಟಮಾಡ ಅಶೋಕ್, ಕಿರಿಯಮಾಡ ಶರಿನ್, ಕಿರಿಯಮಾಡ ಶಾನ್, ಬೇಪಾಡಿಯಂಡ ದಿನು, ಅಪ್ಪೆಂಗಡ ಮಾಲೆ, ಪಾರ್ವಂಗಡ ನವೀನ್ ವಿಚಾರಣೆ ಸಂದರ್ಭ ಹಾಜರಿದ್ದರು.
Breaking News
- *ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ*
- *ಕೊಡಗು ಹಿತರಕ್ಷಣಾ ವೇದಿಕೆಯಿಂದ ಸಂಭ್ರಮದ 76ನೇ ಗಣರಾಜ್ಯೋತ್ಸವ ಆಚರಣೆ*
- *ರಾಜಾಸೀಟು ಸೊಬಗಿಗೆ ಮನಸೋತ ಉಸ್ತುವಾರಿ ಸಚಿವರು*
- *ಸಿಕ್ಕ ಸಿಕ್ಕ ವಾಹನಗಳ ಮೇಲೆ ಒಂಟಿ ಸಲಗ ದಾಳಿ*
- *ಕೊಡ್ಲಿಪೇಟೆ ನಂದಿಪುರ ಕೆರೆ ಅಭಿವೃದ್ಧಿ : ಗ್ಯಾರಂಟಿ ಯೋಜನೆಗಳ ಮೂಲಕ ಭ್ರಷ್ಟಚಾರವಿಲ್ಲದೆ ಜನರಿಗೆ ನೇರವಾಗಿ ಹಣ : ಸಚಿವ ಎನ್.ಎಸ್.ಭೋಸರಾಜು*
- *ಸಿಎನ್ಸಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಕೊಡಗು ವಿಶ್ವವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಡಿಪ್ಲೊಮೋ ಕೋರ್ಸ್ ಲೋಕಾರ್ಪಣೆ : ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು : ಸಚಿವ ಎನ್ ಎಸ್ ಭೋಸರಾಜು ಕರೆ*
- *ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ : ಸಮಸ್ಯೆಗಳ ಪರಿಹಾರಕ್ಕೆ ಸಚಿವ ಎನ್.ಎಸ್.ಭೋಸರಾಜು ಸೂಚನೆ*
- *ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದಿಂದ ಗುರುವಂದನಾ ಕಾರ್ಯಕ್ರಮ*
- *ಮಡಿಕೇರಿಯಲ್ಲಿ 76 ನೇ ಗಣರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ*