ನಾಪೋಕ್ಲು ಜೂ.16 : ನಾಪೋಕ್ಲು-ಮೂರ್ನಾಡು ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋಕೇರಿ ಗ್ರಾಮದ ಎಚ್. ಕೆ.ಸುದೀಪ್ ಎಂಬ ಯುವಕನ ಚಿಕಿತ್ಸೆಗಾಗಿ ನಾಪೋಕ್ಲು ವಾಹನ ಚಾಲಕರ ಸಂಘದಿಂದ ಆರ್ಥಿಕ ನೆರವು ನೀಡಲಾಯಿತು.
ನಾಪೋಕ್ಲು ವಾಹನ ಚಾಲಕರ ಸಂಘದಿಂದ ಸಾರ್ವಜನಿಕರ ಸಹಾಯದಿಂದ ಸಂಗ್ರಹಿಸಲಾದ 21,670 ರೂ. ಗಳನ್ನು ಯುವಕನ ತಾಯಿ ಸವಿತಾ ಅವರಿಗೆ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಅವರ ನೇತೃತ್ವದಲ್ಲಿ ನಾಪೋಕ್ಲು ವಿನ ಸಂಘದ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಸದಸ್ಯರಾದ ರಾಶಿದ್, ಸುನಿಲ್, ಪ್ರಕಾಶ್,ಶಕೀಲ್, ಜಗದೀಶ್ ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು