ಮಡಿಕೇರಿ ಜು.19 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ 19 ನೇ ವಷ೯ದ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ ಮತ್ತು ಕಾಯ೯ದಶಿ೯ಯಾಗಿ ರತ್ನಾಕರ್ ರೈ ಆಯ್ಕೆಯಾಗಿದ್ದಾರೆ.
ರೋಟರಿ ಮಿಸ್ಟಿ ಹಿಲ್ಸ್ ನ 2023-24 ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ ಹಾಗೂ ಕಾಯ೯ದಶಿ೯ಯಾಗಿ ರತ್ನಾಕರ್ ರೈ ಆಯ್ಕೆಯಾಗಿದ್ದು, ಆಡಳಿತ ಮಂಡಳಿಯ ಪದಗ್ರಹಣ ಕಾಯ೯ಕ್ರಮ ಜು.4 ರಂದು ಸಂಜೆ 6.30 ಗಂಟೆಗೆ ಮಡಿಕೇರಿ ಹೊರವಲಯದಲ್ಲಿನ ಆಹನ್ ಹಿಲ್ ಕಾಟೇಜ್ ನಲ್ಲಿ ನಡೆಯಲಿದೆ.
ರೋಟರಿ ಜಿಲ್ಲೆ 3181 ನ ಮುಂದಿನ ಸಾಲಿನ ನಿಯೋಜಿತ ಗವನ೯ರ್ ವಿಕ್ರಂದತ್ತ ಪದಗ್ರಹಣ ನೆರವೇರಿಸಲಿದ್ದಾರೆ. ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ನಿಗ೯ಮಿತ ಅಧ್ಯಕ್ಷ ಪ್ರಸಾದ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಮಿಸ್ಟಿ ಹಿಲ್ಸ್ ಪ್ರಕಟಣೆ ತಿಳಿಸಿದೆ.









