ಮಡಿಕೇರಿ ಜೂ.19 : ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭಗೊಂಡಿತು.
ಅಂಗಡಿಯನ್ನು ಕರಾವಳಿ ಕೊಕೋನೆಟ್ ಪೈಚಾರು ಮಾಲೀಕ ಅಬೂಬಕ್ಕರ್ ಬೊಳುಬೈಲು
ಉದ್ಘಾಟಿಸಿದರು.
ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಕುರುಂಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಅರಂತೋಡು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಜಾಲ್ಸೂರು ಗ್ರಾ.ಪಂ.ಸದಸ್ಯ ಮುಜೀಬ್ ಪೈಚಾರು, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ಪಿ.ಎ.ಉಮ್ಮರ್, ವಿದ್ಯಾಬೋಧಿನಿ ಬಾಳಿಲ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಜತ್ತಪ್ಪ ಮಾಸ್ಟರ್ , ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಎ.ಕೆ.ಶಶಿಕುಮಾರ್, ಅರಂತೋಡು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ, ಇಂಡಿಯನ್ ಮಾರ್ಕೆಟಿಂಗ್ ಅರಂತೋಡಿನ ಹಂಝ ಬೊಳುಬೈಲು, ಕರ್ನಾಟಕ ರಬ್ಬರ್ ಮಾರ್ಕೆಟಿಂಗ್ ಪೈಚಾರ್ ನ ಸಂಶುದ್ದೀನ್, ಶಾರಿಕ್, ಅಬ್ದುಲ್ಲಾ, ನಿರಂಜನ, ಸಿರಾಜ್, ಮತ್ತಿತರರು ಹಾಜರಿದ್ದರು. ಸುದ್ದಿ ಬಿಡುಗಡೆ ಪ್ರತಿನಿಧಿ ತಾಜುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.








