ಮಡಿಕೇರಿ ಜೂ.19 : ಬೆಂಗಳೂರಿನ ಪ್ರತಿಷ್ಠಿತ ವೀಣಾಧರಿ ಇನ್ಸ್‍ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಮತ್ತು ಫೈನ್ ಆಟ್ಸ್ ನಡೆಸಿದ ಆನ್‍ಲೈನ್ ಅಂತರಾಷ್ಟ್ರೀಯ ಮಟ್ಟದ ಫಿಲಂ ಮ್ಯೂಸಿಕ್, ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಕೊಡಗಿನ ಬಾಳೆಲೆಯ ಸಿ.ವಿ.ಅನ್ವಿತ್ ಕುಮಾರ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಇವರು ಬಾಳೆಲೆಯ ಗಣೇಶ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಮತ್ತು ಚಂದ್ರಕಲಾ ದಂಪತಿಗಳ ಪುತ್ರನಾಗಿದ್ದು, ಗೋಣಿಕೊಪ್ಪದ ಕಾವೇರಿ ಕಾಲೇಜಿನ ಬಿಸಿಎವಿದ್ಯಾರ್ಥಿ. ವತ್ಸಲ ನಾರಾಯಣ್ ಅವರ ಶಿಷ್ಯ.









