ಸೋಮವಾರಪೇಟೆ ಜೂ.22 : ಎಲ್‍ಐಸಿ ಯಲ್ಲಿ 34 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ವಾಕರ್ಸ್ ವಿಂಗ್ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ.ನಾಗೇಶ್ ಅವರನ್ನು ಸೋಮವಾರಪೇಟೆ ವಾಕರ್ಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ಸುವಿದ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಸನ್ಮಾನಿಸಲಾಯಿತು.
ವಾಕರ್ಸ್ ಅಧ್ಯಕ್ಷ ಮೋಹನ್ ನಿಶಾಂತ್, ಖಜಾಂಚಿ ನವೀನ್, ಪದಾಧಿಕಾರಿಗಳಾದ ಎಸ್.ಡಿ.ವಿಜೇತ್, ಶ್ರೀಹರ್ಷ, ಉದಯರವಿ, ಕುಮಾರ್, ಬಿ.ಟಿ. ತಿಮ್ಮಶೆಟ್ಟಿ, ಆಶಾ ಮೋಹನ್, ಇಂದಿರಾ ರವಿ, ವಿದ್ಯಾ ಸುಂದರ್, ಲತಾ ನಾಗೇಶ್, ಪ್ರೇಮಾ ಹೃಶಿಕೇಶ್, ರಾಣಿ ದಿನೇಶ್, ಲತಾ ನವೀನ್, ಶರ್ಮಿಳಾ ರಮೇಶ್, ಅಶ್ವಿನಿ ಉದಯ್ ಕುಮಾರ್ ಇದ್ದರು.








