ಮಡಿಕೇರಿ ಜೂ.22 : ಕುಶಾಲನಗರ ಸಮೀಪದ ಕೊಪ್ಪ ಹಳೆಯ ಸೇತುವೆ ಕೆಳಭಾಗದಲ್ಲಿ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದೆ. ಪಟ್ಟಣದ ಚಿಕ್ಕಣ್ಣ ಬಡಾವಣೆಯ ನಿವಾಸಿ, ಲಾರಿ ಚಾಲಕ ಗಂಗಾಧರ (72) ಎಂಬುವವರೇ ಮೃತ ವ್ಯಕ್ತಿಯಾಗಿದ್ದು, ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಕಾವೇರಿ ನದಿ ಸೇತುವೆ ಮೇಲ್ಭಾಗದಿಂದ ಇಂದು ಮುಂಜಾನೆ ಗಂಗಾಧರ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ನದಿ ಬಂಡೆ ಮೇಲೆ ರಕ್ತ ಸಿಕ್ತ ಮೃತ ದೇಹವನ್ನು ಕಂಡ ಸ್ಥಳೀಯರು ಕುಶಾಲನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪಟ್ಟಣದ ಠಾಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿಗಳು ಭೇಟಿ ಸ್ಥಳಕ್ಕೆ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.







