ಮಡಿಕೇರಿ ಜೂ.27 : ಭಾಗಮಂಡಲ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ 2021- 23 ನೇ ಸಾಲಿನ ತರಬೇತುದಾರರಿಗೆ ಬೀಳ್ಕೊಡುಗೆ ನೀಡಲಾಯಿತು.
ತರಬೇತಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಮಂಡಲದ ಅಂಬೇಡ್ಕರ್ ವಸತಿ ಸ್ಕೂಲ್ ಪ್ರಾಂಶುಪಾಲೆ ನೀತು ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭಹಾರೈಸಿದರು.
ಪ್ರಾಚಾರ್ಯರಾದ ಕೆ.ವಿ.ಶ್ರೀಕಾಂತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಯೊಂದು ವೃತ್ತಿ ವಿಭಾಗದ ಒಬ್ಬ ಅತ್ಯುತ್ತಮ ವಿದ್ಯಾರ್ಥಿಯನ್ನು ಗೌರವಿಸಲಾಯಿತು.
ಕಿರಿಯ ತರಬೇತಿ ಅಧಿಕಾರಿ ಕೆ.ಜಿ.ಜಯಪ್ರಕಾಶ್ ವಾರ್ಷಿಕ ವರದಿ ಮಂಡಿಸಿದರು. ಕಿರಿಯ ತರಬೇತಿ ಅಧಿಕಾರಿ ಪುನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಸಂಸ್ಥೆ ಕಛೇರಿ ಅಧೀಕ್ಷಕ ಸಿ.ಕೆ.ವಿನೋದ್ ಸ್ವಾಗತಿಸಿದರು. ದ್ವಿತೀಯ ದರ್ಜೆ ಸಹಾಯಕ ಕೆ.ಟಿ. ಅರುಣ್ ವಂದಿಸಿದರು.