ಮಡಿಕೇರಿ ಜೂ.28 : ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಎನ್.ಪ್ರಿಣಿತ್ ಸುಬ್ಬಯ್ಯ ಮಂಡಿಸಿದ ‘ಎಲೆಕ್ಟ್ರೋ ಅನಾಲಿಟಿಕಲ್ ಮೆಥಡಾಲಜಿ ಫಾರ್ ದಿ ಡಿಟರ್ಮಿನೇಶನ್ ಆಫ್ ಎಲೆಕ್ರೋಆಕ್ಟಿವ್ ಸ್ಪೀಸೀಸ್ ಯೂಸಿಂಗ್ ಕೆಮಿಕಲಿ ಮಾಡಿಫೈಡ್ ಕಾರ್ಬನ್ ಪೇಸ್ಟ್ ಎಲೆಕ್ಟೋಡ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಹಾಗೆಯೇ ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಎನ್.ಹರೀಶ ಮಂಡಿಸಿದ ‘ಡೆವಲಪ್ಮೆಂಟ್ ಆಫ್ ಎಲೆಕ್ಟ್ರೋಕೆಮಿಕಲ್ ಸೆನ್ಸಾರ್ ಫಾರ್ ದ ಎಲೆಕ್ಟ್ರೋಕ್ಯಾಟಲೈಟಿಕ್ ಇನ್ವೆಸ್ಟಿಗೇಶನ್ ಆಫ್ ಬಯಲಾಜಿಕಲಿ ಆಕ್ಟಿವ್ ಮಾಲಿಕ್ಯೂಲ್ಸ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಇವರು ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಜೆ.ಜಿ.ಮಂಜುನಾಥ ಅವರ ಮಾರ್ಗದರ್ಶನದಲ್ಲಿ ತಮ್ಮ ಪ್ರಬಂಧ ಮಂಡಿಸಿದ್ದರು. ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.









