ಮಡಿಕೇರಿ ಜೂ.29 : ಮಂಗಳೂರಿನಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಮತ್ತು ತರಬೇತಿ ಸಮ್ಮೇಳನ “ಸಂಪ್ರಾಪ್ತಿ -2023” ರಲ್ಲಿ ರೋಟರಿ ಮಡಿಕೇರಿಯು “ಪ್ಲಾಟಿನಂ ಪ್ಲಸ್” ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಜಲಸಿರಿ, ಆರೋಗ್ಯ ಸಿರಿ, ವನಸಿರಿ, ವಿದ್ಯಾಸಿರಿ ಈ ಎಲ್ಲಾ ವಿಭಾಗಗಳಲ್ಲಿ ರೋಟರಿ ಮಡಿಕೇರಿ ಪ್ರಶಸ್ತಿ ಗಳಿಸಿದೆ. ಸಂಸ್ಥೆಯ ಮಾದರಿ ಕಾರ್ಯಗಳನ್ನು ಶ್ಲಾಘಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ ಅವರನ್ನು ಜಿಲ್ಲಾ ಗವರ್ನರ್ ರೋಟರಿಯನ್ ಪ್ರಕಾಶ್ ಕಾರಂತ್ ಸನ್ಮಾನಿಸಿದರು.
ರೋಟರಿ ಮಡಿಕೇರಿಯ ಕಾರ್ಯದರ್ಶಿ ಸುದಯ್ ನಾಣಯ್ಯ, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿಯನ್‍ಗಳಾದ ಡಾ.ರವಿ ಅಪ್ಪಾಜಿ, ಅನಿಲ್ ಕೃಷ್ಣಾನಿ, ಗೀತಾ ಗಿರೀಶ್, ಲಲಿತ ರಾಘವನ್, ಪಾರ್ವತಿ ಚೀಯಣ್ಣ ಉಪಸ್ಥಿತರಿದ್ದರು.







