ಮಡಿಕೇರಿ ಜೂ.29 : ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ತೀರ್ಮಾನಿಸಿದ್ದು, ಅದರಂತೆ ವೃತ್ತಕ್ಕೂ ಅಂಬೇಡ್ಕರ್ ಹೆಸರಿಡುವಂತೆ ದಲಿತ ಸಂಘಟನೆಗಳು ಮನವಿ ಮಾಡಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ನೇತೃತ್ವದಲ್ಲಿ ನಗರಸಭೆ ಪೌರಯುಕ್ತ ವಿಜಯ ಅವರಿಗೆ ಮನವಿ ಸಲ್ಲಿಸಿದ ರೈತಪರ ಸಂಘ, ಸಿಪಿಐಎಂಎಲ್, ದಲಿತ ಒಕ್ಕೂಟ ಹಾಗೂ ದಲಿತ ಮುಖಂಡರು, ಸಂಘದ ಪದಾಧಿಕಾರಿಗಳು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ತೀರ್ಮಾನಿಸಿರುವುದು ಕೊಡಗು ಜಿಲ್ಲೆಯ ಎಲ್ಲಾ ಜನಾಂಗಕ್ಕೂ ಎಲ್ಲಾ ದಲಿತಪರ ಸಂಘಟನೆಯ ಹೋರಾಟಗಾರರಿಗೂ ಸಂತಸದ ವಿಚಾರ. ಆದರಂತೆ ವೃತ್ತಕ್ಕೂ ಅವರ ಹೆಸರು ಇಡಬೇಕೆಂದು ಮನವಿ ಮಾಡಿದರು.
ಈಗಾಗಲೇ ಸ್ವಾಮಿ ವಿವೇಕಾನಂದ ಅವರ ಹೆಸರನ್ನು ಈಡಲು ನಿರ್ಧರಿಸಲಾಗಿದ್ದು, ಅದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸ್ವಾಮಿ ವಿವೇಕಾನಂದ ಅವರ ಹೆಸರನ್ನು ಬೇರೆ ವೃತ್ತಕ್ಕೂ, ಉದ್ಯಾನವಕ್ಕೂ ಇಡುವಂತೆ ಒತ್ತಾಯಿಸಿದರು.
ಸಿಪಿಐಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್.ನಿರ್ವಣಪ್ಪ, ಬಿಎಸ್‍ಪಿ ಮಾಜಿ ಅಧ್ಯಕ್ಷ ಪ್ರೇಮ್ ಕುಮಾರ್, ಆರ್‍ಪಿಐ ರಾಜ್ಯ ಸಂಘಟನಾ ಸಂಚಾಲಕ ಎಸ್.ಕೆ.ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಟಿ.ಸುರೇಶ್ ಕುಮಾರ್, ಕರ್ನಾಟಕದ ದಲಿತ ಸಂಘರ್ಷ ಸಮಿತಿ ಬಿಮಾವಾದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ರಮೇಶ್, ರೈತ ಸಂಘದ ಉಪಾಧ್ಯಕ್ಷ ಎಸ್.ಆರ್.ಮಂಜುನಾಥ್, ಕಾರ್ಯಕರ್ತ ಪ್ರಕಾಶ್, ರೈತ ಸಂಘದ ಅಧ್ಯಕ್ಷ ಸಣ್ಣಪ್ಪ, ಕೊಡಗು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಸುಲೇಮಾನ್, ಪ್ರಮುಖರಾದ ರೂಪ, ಕಾಂಗ್ರೆಸ್ ತಾಲೂಕು ಪ್ರದಾನ ಕಾರ್ಯದರ್ಶಿ ಹೆಚ್.ಎಸ್.ಗೋಪಿನಾಥ್, ಕೋದಂಡ ರಾಮ ಸಂಘದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಎಂ.ಜಿ.ವಿನೋದ್, ಪ್ರದಾನ ಕಾರ್ಯದರ್ಶಿ ಹೆಚ್.ಎಸ್.ಸತೀಶ್, ಮಲ್ಲಿಕಾರ್ಜುನ್ ನಗರ ಜ್ಯೋತಿ ಯುವಕ ಸಂಘ ಕಾರ್ಯದರ್ಶಿ ದೇವರಾಜ್, ಪ್ರಮುಖರಾದ ಮಹೇಶ್, ಮುಬೀನ್, ಸೀನಾ, ಅಭಿ, ಮರಿ ಗೌಡ, ಗಣಪತಿ ಮನವಿ ನೀಡುವ ಸಂದರ್ಭ ಹಾಜರಿದ್ದರು.








