ಕುಶಾಲನಗರ, ಜೂ.30 : ಕುಶಾಲನಗರ ತಾಲ್ಲೂಕಿನ ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಸಿ.ದುರ್ಗೇಶ್ ಅವರನ್ನು ತಾಲ್ಲೂಕು ಶಿಕ್ಷಣ ಇಲಾಖೆ, ತಾಲ್ಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾರ ಸಂಘ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಶಾಲೆಯ ಆಡಳಿತ ಮಂಡಳಿ ಮತ್ತು ಶಾಲೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ನಿವೃತ್ತಗೊಂಡ ಮುಖ್ಯ ಶಿಕ್ಷಕ ದುರ್ಗೇಶ್ ಅವರಿಗೆ ಶಾಲು ಹೊದಿಸಿ ಫಲ ತಾಂಬುಲ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ಈ ಶಾಲೆಯಲ್ಲಿ ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಜತೆಗೂಡಿ ನಿವೃತ್ತಗೊಂಡ ಮುಖ್ಯ ಶಿಕ್ಷಕರನ್ನು ಗೌರವಿಸಿ ಬೀಳ್ಕೊಡುತ್ತಿರುವುದು ಗುರುಗಳಿಗೆ ಸಮಾಜ ನೀಡುತ್ತಿರುವ ದ್ಯೋತಕವಾಗಿದೆ ಎಂದು ಪ್ರಶಂಸಿದರು.
ಗ್ರಾಮೀಣ ಶಾಲೆಯ ಪ್ರಗತಿಗೆ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹವು ಶಾಲೆಯ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿದಿದೆ ಎಂದರು.
ಶಾಲಾ ಆಡಳಿತ ಮಂಡಳಿ ಹಾಗೂ ನಿವೃತ್ತಗೊಳ್ಳುತ್ತಿರುವ ಮುಖ್ಯ ಶಿಕ್ಷಕ ದುರ್ಗೇಶ್ ಮತ್ತು ಶಿಕ್ಷಕರ ತಂಡವು ಶಾಲೆಯ ಪ್ರಗತಿಗೆ ಶ್ರಮಿಸುತ್ತಿರುವುದನ್ನು ಸುರೇಶ್ ಪ್ರಶಂಸಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಸಿ.ದುರ್ಗೇಶ್, ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು
ಜತೆಗೂಡಿ ಶಾಲಾ ಪ್ರಗತಿಗೆ ಶ್ರಮಿಸಿದ್ದು ಸಂತಸ ತಂದಿದೆ ಎಂದರು.
ಮೈಸೂರಿನ ಜನಪದ ವಿದ್ವಾಂಸ ಡಾ ಪಿ.ಕೆ.ರಾಜಶೇಖರ್, ದಾನಿ ಪ್ರವೀಣ್, ಸಂಸ್ಥೆಯ ಪ್ರಮುಖರಾದ ಬಿ.ಪಿ.ಅಪ್ಪಣ್ಣ, ಎಂ.ಬಿ.ಮೊಣ್ಣಪ್ಪ, ರಘು ಸೋಮಯ್ಯ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ವಿ.ಅರುಣಕುಮಾರ್,
ಪ್ರಭಾರ ಮುಖ್ಯ ಶಿಕ್ಷಕಿ ಎನ್. ಪುಷ್ಪ, ಮಕ್ಕಳ ಸುರಕ್ಷತಾ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹೇಮಂತ್, ಉಪಾಧ್ಯಕ್ಷೆ ಇಂದಿರಾ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಆರ್.ರತ್ನಕುಮಾರ್, ಮುಖ್ಯ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಬಿ.ಎನ್.ಪುಷ್ಪ, ಪಾಲಾಕ್ಷ, ಸೋಮಯ್ಯ, ಎಂ.ವಿ.ಮಂಜೇಶ್, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಎಸ್.ನಾಗರಾಜ್,
ರಜನಿ, ಟಿ.ವಿ.ಶೈಲಾ , ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು
ಇದ್ದರು.
ವೃತ್ತಿ ಶಿಕ್ಷಣ ಶಿಕ್ಷಕ ಎ.ಟಿ.ಸೋಮಯ್ಯ ನಿರ್ವಹಿಸಿದರು. ಶಿಕ್ಷಕಿ ಕುಸುಮ ವಂದಿಸಿದರು.








