ವಿರಾಜಪೇಟೆ ಜೂ.30 : ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ(ಕೃತಕ ವಿಜ್ಞಾನ) ಎಂಬ ಹೊಸ ಆವಿಷ್ಕಾರದ ಬಗ್ಗೆ 6ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಪೊನ್ನಂಪೇಟೆಯ “ಓಜಸ್ವಿ” ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ.ಕವಿತಾ ಹಾಗೂ ಸಿಇಓ ಕೋ ಫೌಂಡರ್ ಜಸ್ಟ್ ರೋಬೋಟಿಕ್ಸ್ ವಿಭಾಗದ ಸಿ.ಡಿ.ಬ್ರಿಜೇಶ್ ಅವರು ಮುಂದಿನ ಕಾಲಘಟ್ಟದಲ್ಲಿ ಈ ಹೊಸ ಆವಿಷ್ಕಾರ ನಮ್ಮ ಜೀವನದ ಒಂದು ಭಾಗವಾಗುವುದಾಗಿಯೂ ಹಾಗೂ ಅದು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಕ್ಕಳಿಗೆ ಮನಮುಟ್ಟುವಂತೆ ಉಪನ್ಯಾಸದಲ್ಲಿ ತಿಳಿಸಿದರು.
ಅಲ್ಲದೆ ಮುಂಬರುವ ದಿನಗಳಲ್ಲಿ ತಮ್ಮ ಪಠ್ಯ ವಿಷಯಗಳ ಬೋಧನೆ ಅವಧಿಯ ಜೊತೆಗೆ “ರೋಬೋಟಿಕ್ಸ್ ಸೈನ್ಸ್” ಎಂಬ ವಿಷಯವನ್ನು ಅಳವಡಿಸುವುದಾಗಿ ಹಾಗೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ.ಎಸ್ ಸುದೇಶ್, ಕಾರ್ಯದರ್ಶಿ ವಿನೋದ್ ಪಿ.ಎನ್ ಹಾಗೂ ಪೋಷಕರು ಹಾಜರಿದ್ದರು.