ಮಡಿಕೇರಿ ಜೂ.30 : ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮಡಿಕೇರಿ ನಗರದ ಹೃದಯ ಭಾಗ ಜನರಲ್ ತಿಮ್ಮಯ್ಯ ವೃತ್ತ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಬಿಳಿಗೇರಿ ಗ್ರಾ.ಪಂ ಮಾಜಿ ಸದಸ್ಯ ಮಂಡುವಂಡ ರಮೇಶ್ ಅಯ್ಯಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್ ನ್ನು ಪುನಶ್ಚೇತನಗೊಳಿಸಲು ಪಣ ತೊಟ್ಟಿದೆ. ಜಿಲ್ಲೆಯಲ್ಲೂ ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕ್ಯಾಂಟೀನ್ ಗೆ ಕಾಯಕಲ್ಪ ನೀಡುವುದರೊಂದಿಗೆ ಬಡವರ ಅನುಕೂಲಕ್ಕಾಗಿ ಜಿಲ್ಲಾಸ್ಪತ್ರೆ ಬಳಿ ಮತ್ತೊಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಲವು ವರ್ಷಗಳ ಹಿಂದೆ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಆರಂಭಗೊಂಡು ಬಡವರಿಗೆ ಕಡಿಮೆ ಖರ್ಚಿನಲ್ಲಿ ಊಟ, ಉಪಹಾರ ದೊರೆಯುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಇಲ್ಲಿನ ಕಾರ್ಯಚಟುವಟಿಕೆ ಸ್ಥಗಿತಗೊಂಡು ಬಡವರು ಹಾಗೂ ಕಾರ್ಮಿಕ ವರ್ಗದ ಊಟಕ್ಕೆ ತೊಂದರೆ ಎದುರಾಯಿತು.
ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮೂಲೆ-ಮೂಲೆಗಳಿಂದ ರೋಗಿಗಳು ಬರುತ್ತಾರೆ. ಬಡ ರೋಗಿಗಳಿಗೆ ಆಸ್ಪತ್ರೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಇದೆ, ಆದರೆ ರೋಗಿಗಳ ಆರೈಕೆಗೆ ಮತ್ತು ಸಾಂತ್ವನ ಹೇಳಲು ಬರುವವರಿಗೆ ಕಡಿಮೆ ದರದಲ್ಲಿ ಊಟ ದೊರೆಯಬೇಕಾಗಿದೆ. ಜಿಲ್ಲಾಸ್ಪತ್ರೆಯ ಆವರಣ ಅಥವಾ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ನಿರೀಕ್ಷಣಾ ಮಂದಿರದ ಆವರಣದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್ ನ್ನು ಆರಂಭಿಸಿದರೆ ಬಡವರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಪ್ರತಿದಿನ ನೂರಾರು ಪ್ರಯಾಣಿಕರು ಬಂದು ಹೋಗುತ್ತಿದ್ದು, ಇವರಿಗೂ ಇಂದಿರಾ ಕ್ಯಾಂಟೀನ್ ಸಹಕಾರಿಯಾಗಲಿದೆ ಎಂದು ರಮೇಶ್ ಅಯ್ಯಪ್ಪ ಅಭಿಪ್ರಾಯಪಟ್ಟರು.
ಈ ಬಗ್ಗೆ ಜಿಲ್ಲೆಯ ಇಬ್ಬರು ಶಾಸಕರುಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದರು.
ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲ್ಲಾರಂಡ ವಿಠಲ ನಂಜಪ್ಪ ಮಾತನಾಡಿ ಮಂಗಳೂರು ರಸ್ತೆಯಲ್ಲಿರುವ ಬಸ್ಸು ತಂಗುದಾಣದ ಕೆಳಭಾಗದಲ್ಲಿ ಇಂದಿರಾ ಕ್ಯಾಂಟೀನ್ ನ್ನು ಆರಂಭಿಸಿದರೆ ಈ ಭಾಗದ ಎಲ್ಲಾ ರಸ್ತೆಗಳ ಮೂಲಕ ತೆರಳುವವರಿಗೂ ಸಹಕಾರಿಯಾಗಲಿದೆ ಎಂದರು.
Breaking News
- *ಕೊಡಗಿನ ಬಸವೇಶ್ವರ, ಪೇಟೆ ರಾಮ ಮಂದಿರ, ವಿಜಯ ವಿನಾಯಕ ದೇವಾಲಯಗಳಲ್ಲಿ ಕಳ್ಳತನ : ಅಂತರ್ ಜಿಲ್ಲಾ ಆರೋಪಿಯ ಬಂಧನ*
- *ಕನಕದಾಸರು ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು : ಶಾಸಕ ಡಾ.ಮಂತರ್ ಗೌಡ*
- *ಜೋಡುಬೀಟಿ- ಕುಂದ ಸಂಪರ್ಕ ರಸ್ತೆಗೆ ನಾಯಕ್ ಕೂಕಂಡ ಎನ್.ಪೊನ್ನಪ್ಪ ನಾಮಕರಣ : ಎಲ್ಲೆಡೆ ವೀರಯೋಧರಿಗೆ ಗೌರವಸಲ್ಲಿಸುವ ಕಾರ್ಯವಾಗಬೇಕು : ಕೊಟ್ಟುಕತ್ತಿರ ಸೋಮಣ್ಣ*
- *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ*
- *ನ.19 ರಂದು ಮಡಿಕೇರಿ ತಲುಪಲಿದೆ ಮದ್ರಾಸ್ ಎಂಜಿನಿಯರಿಂಗ್ ಆರ್ಮಿ ಗ್ರೂಪ್ನ ಬೈಕ್ ರ್ಯಾಲಿ*
- *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕನಕದಾಸ ಜಯಂತಿಯ ಅರ್ಥಪೂರ್ಣ ಆಚರಣೆ : ದಾಸ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಕನಕದಾಸರು : ಮೇಜರ್ ಡಾ.ರಾಘವ ಶ್ಲಾಘನೆ*
- *ನ.21 ರಂದು ಮಡಿಕೇರಿಯಲ್ಲಿ ರಕ್ತದಾನ ಮತ್ತು ಕಣ್ಣು ತಪಾಸಣಾ ಶಿಬಿರ*
- *ಮಡಿಕೇರಿಯಲ್ಲಿ ವಕೀಲರ ಕ್ರೀಡಾಕೂಟ : ಕ್ರೀಡಾ ಸ್ಫೂರ್ತಿ ಜೀವನಕ್ಕೂ ಸ್ಫೂರ್ತಿಯಾಗಲಿ : ಶಾಸಕ ಡಾ.ಮಂತರ್ ಗೌಡ*
- ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ನ ವಾಷಿ೯ಕ ಸಮ್ಮೇಳನ : ಕಾಫಿ ಕೃಷಿಕರ ನೆರವಿಗೆ ಸಕಾ೯ರ ಧಾವಿಸಬೇಕು : ಮ್ಯಾಥ್ಯು ಅಬ್ರಾಹಂ*
- *ಡಾ.ಸೂರ್ಯ ಕುಮಾರ್ ಅವರ “ಮಂಗಳಿ” ಪುಸ್ತಕ ಬಿಡುಗಡೆ*