ವಿರಾಜಪೇಟೆ ಜು 1 : ದೇವಣಗೇರಿ ಸಹಕಾರ ದವಸ ಭಂಡಾರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಕೇಂದ್ರದ ಸುತ್ತಮತ್ತ ಬಿಟ್ಟಂಗಾಲ ವಿಪತ್ತು ನಿರ್ವಹಣೆ ಘಟಕದ ವತಿಯಿಂದ ಶ್ರಮದಾನ ನಡೆಸಲಾಯಿತು.
ಆವರಣವನ್ನು ಕಳೆ ಹೊಡೆಯುವ ಯಂತ್ರದಿಂದ ಸ್ವಚ್ಛತೆ ಮಾಡಲಾಯಿತು.
ಶ್ರಮದಾನದಲ್ಲಿ ವಿಪತ್ತು ತಂಡದ ಸಂಯೊಜಕಿ ರೇಖಾ ಗಣೇಶ್ ಸ್ವಯಂ ಸೇವಕರಾದ ಜೀವನ್ ನವಜೀವನ ಸಮಿತಿ ಸದಸ್ಯರಾದ ರಮೇಶ್, ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.









