ಸೋಮವಾರಪೇಟೆ ಜು.1 : ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ವೆಂಕಟೇಶ್ ಅವರನ್ನು ಸೋಮವಾರಪೇಟೆ ತಾಲೂಕು ಕಚೇರಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಎಸ್.ಎನ್.ನರಗುಂದ್ ಅಧ್ಯಕ್ಷೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಳೆದ 35 ವರ್ಷಗಳ ಸೇವೆಯಿಂದ ನಿವೃತ್ತಿ ಹೊಂದಿದ ವೆಂಕಟೇಶ್ ಅವರನ್ನು ತಾಲೂಕು ಕಚೇರಿಯ ಎಲ್ಲಾ ಸಿಬ್ಬಂದಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ವೆಂಕಟೇಶ್ ವೃತ್ತಿಯಲ್ಲಿ ಅನುಭವಸ್ಥರು ಅವರಿಗೆ ವಹಿಸಿದ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಖಚೇರಿಗೆ ಬರುವ ಜನಸಾಮಾನ್ಯ ರೊಂದಿಗೆ ಸೌಜನ್ಯ ದಿಂದ ವರ್ತಿಸುತ್ತಿದ್ದರು,ಸರಳ ವ್ಯಕ್ತಿತ್ವ ಹೊಂದಿರುವ ಪ್ರಾಮಾಣಿಕ ವ್ಯಕ್ತಿ ಎಂದರು.
ಶಿರಸ್ತೇದಾರ್ ಗಳಾದ ಲೋಹಿತ್, ಸುಶೀಲ ಪಳಂಗಪ್ಪ , ರಾಜಸ್ವ, ನಿರೀಕ್ಷಕ ಪ್ರಹ್ಲಾದ್ ,
ತಾಲೂಕು ಕಚೇರಿ ಹಾಗೂ ನಾಡಕಚೇರಿ ಸಿಬ್ಬಂದಿಗಳು ಹಾಜರಿದ್ದರು.