ಸುಂಟಿಕೊಪ್ಪ ಜು.3 : ವಿದ್ಯಾರ್ಥಿಗಳು ಉತ್ಸಾಹ ಭರಿತರಾಗಿ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ತಮ್ಮ ಗುರಿಯನ್ನು ಲಾಭದಾಯಕವಾಗಿ ಮುಟ್ಟಲು ಸಾಧ್ಯವಾಗಲಿದೆ ಎಂದು ಸ್ವಸ್ಥ ಶಾಲೆಯ ಸಿ.ಬಿ.ಆರ್ ಸಂಯೋಜಕ ವ್ಯಕ್ತಿ ಮುರುಗೇಶ್ ಹೇಳಿದರು.
ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭಿಕ ಉತ್ಸಾಹ ವ್ಯಕ್ತಿತ್ವ ವಿಕಸನ ಉಪನ್ಯಾಸದ ಕಾರ್ಯಕ್ರಮದಲ್ಲಿ ಸ್ವಸ್ಥ ಶಾಲೆಯ ಸಿ.ಬಿ.ಆರ್ ಸಂಯೋಜಕ ಶೈಕ್ಷಣಿಕ ಪೂರಕವಾದ ಹತ್ತು ಹಲವು ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಿರ್ಮಿಸಿ ಪ್ರದರ್ಶಿಸಿದರು.
ಯಾವುದೇ ಒಂದು ಗುರಿಯನ್ನು ತಲುಪ ಬೇಕಾದರೆ ಅಥವಾ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಆರಂಭದಲ್ಲಿ ಉತ್ಸಾಹ ಉರುಪನ್ನು ಹೊಂದಿರಬೇಕು ಎಂದರು.
ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳನ್ನು ಮನರಂಜಿಸಿದರು. ಕ್ರೀಡಾಪಟು ಸಚಿನ್ ತೊಂಡಲ್ಕರ್, ಲತಾ ಮಂಜೆಸ್ಕರ್, ಎ.ಆರ್.ರಹೆಮಾನ್ ಮುಂತಾದ ಸಾಧಕರ ಸಾಧನೆಯ ಬಗ್ಗೆ ವಿದ್ಯಾರ್ಥಿಗಲಿಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿಗಳು ತರಗಗತಿ ಕೋಣೆಯಲ್ಲಿ ಗ್ರಹಿಕಾ ಸಾಮರ್ಥವನ್ನು ಉತ್ತಮಗೊಳಿಸಿಕೊಳ್ಳಲು ಅವರುಗಳಿಗೆ ಸೂಕ್ತ ತರಬೇತಿಯ ಅವಶ್ಯಕವಾಗಿರುತ್ತದೆ. ವಿದ್ಯಾರ್ಥಿಗಳು ಆಸಕ್ತರಹಿತರಾಗಿ ಪಾಠಪ್ರವಚನಗಳ ಬಗ್ಗೆ ಒಲವನ್ನು ಹೊಂದಿದ್ದರೆ ಅವರುಗಳ ವಿದ್ಯಾರ್ಥಿ ಜೀವನವು ಫಲದಾಯಕವಾಗಿರುವುದಿಲ್ಲ ಎಂದು ನುಡಿದರು.
ಇದೇ ಸಂದರ್ಭ ಕಾಲೇಜಿನ ಪ್ರಾಂಶುಪಾಲರು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೇರಿದಂತೆ ಗಣ್ಯರು ಮುರುಗೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವೈ.ಎಂ.ಕರುಂಬಯ್ಯ, ಕಾರ್ಯದರ್ಶಿ ರಮೇಶ್ ಪಿಳ್ಳ ಆಗಮಿಸಿದ್ದರು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಜಾನ್ ವಹಿಸಿದ್ದರು, ನಿರೂಪಣೆಯನ್ನು ಉಪನ್ಯಾಸಕ ಈಶ ನೆರವೇರಿಸಿದರು. ಕಾಲೇಜಿನ ಸರ್ವ ಉಪನ್ಯಾಸಕ ಕೆ.ಸಿ.ಕವಿತಾ, ಸರಳಾ, ಸುನೀತಾ, ಪದ್ಮಾವತಿ, ಕವಿತಭಕ್ತಾ, ಮಂಜುಳಾ, ಸುಚಿತ್ರಾ, ಅಭಿಷೇಕ್, ಅನುಷಾ, ಸಂದ್ಯಾ, ಕನಕ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.









