ಮಡಿಕೇರಿ ಜು.3 : ಗುಡ್ಡೆಹೊಸೂರು-ಹಾರಂಗಿ ರಸ್ತೆಯ ಜಮೀನಿನಲ್ಲಿ ಮೂರು ವರ್ಷದ ಗಂಡು ಚಿರತೆಯೊಂದರ ಮೃತದೇಹ ಪತ್ತೆಯಾಗಿದೆ.
ಮಹಮ್ಮದ್ ಫಿರ್ ಎಂಬವರಿಗೆ ಸೇರಿದ ತೋಟದಲ್ಲಿ ಚಿರತೆಯ ಮೃತದೇಹಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಉರುಳಿಗೆ ಸಿಲುಕಿ ಚಿರತೆ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ.