ಮಡಿಕೇರಿ ಜು.3 : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು.
ಚುನಾವಣಾ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್ ಕುಂದಲಪಾಡಿ ಬಿ ಅವರು ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ಕಿರಣ ಬಂಗಾರಕೋಡಿ, ಅನುಮೋದಕರಾಗಿ ಜಯರಾಮ ನಿಡ್ಯಮಲೆ ಬಿ ಇವರು ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಪೆರುಮುಂಡ ಎಂ ನಾಮಪತ್ರ ಸಲ್ಲಿಸಿದರು., ಸೂಚಕರಾಗಿ ಶೇಷಪ್ಪ ನಾಯ್ಕ ನಿಡ್ಯಮಲೆ ಹಾಗೂ ಅನುಮೋದಕರಾಗಿ ಹೊನ್ನಪ್ಪ ಅಮಚೂರು ಅನುಮೋದಿಸಿದರು.
ಇನ್ನುಳಿದಂತೆ ಯಾವುದೇ ನಾಮಪತ್ರಗಳು ಬಾರದ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಬಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪೆರುಮುಂಡ ಎಂ ಆಯ್ಕೆಯಾದರು.
ಚುನಾವಣೆ ಅಧಿಕಾರಿ ಬಿ.ಜಿ.ಸಂದೀಪ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.