ಮಡಿಕೇರಿ ಜು.4 : ನೀರಗುಂದ ಗ್ರಾಮದ ಮಹಿಳೆ ದಿವ್ಯಶ್ರೀ (30) ಮತ್ತು ಮೂರು ವರ್ಷದ ಪುತ್ರಿ ಜೂ.27 ರಿಂದ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ ಎಂದು ಪತಿ ನಿಂಗರಾಜು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕನ್ನಡ ಭಾಷೆ ಮಾತನಾಡ ಬಲ್ಲ ಮಹಿಳೆ 157 ಸೆಂ.ಮೀ ಎತ್ತರ ಇದ್ದು, ಗೋದಿ ಮೈ ಬಣ್ಣ, ದುಂಡು ಮುಖ, ಕಪ್ಪು ಕೂದಲು, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮಹಿಳೆಯನ್ನು ಕಂಡವರು ಶನಿವಾರಸಂತೆ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.