ಮಡಿಕೇರಿ ಜು.4 : ಮಂಗಳೂರು ವಿಶ್ವವಿದ್ಯಾನಿಲಯ/ ಕೊಡಗು ವಿಶ್ವವಿದ್ಯಾನಿಲಯದ ಅಧೀನ ಕಾಲೇಜಿನ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಿ.ವಿಜಯಲತ ಇವರನ್ನು ಪ್ರೊಫೆಸರ್/ ಗ್ರಂಥಪಾಲಕರಾಗಿ ಪದೋನ್ನತಿ ನೀಡಿ ಆಯ್ಕೆ ಮಾಡಲಾಗಿದೆ.
ಇಲ್ಲಿಯ ತನಕ ವಿಶ್ವವಿದ್ಯಾನಿಲಯದ ಬೋಧಕ ವರ್ಗದವರಿಗೆ ಹಾಗೂ ವಿಶ್ವವಿದ್ಯಾನಿಲಯದ ಗ್ರಂಥ ಪಾಲಕರುಗಳಿಗೆ ಮಾತ್ರ ಪ್ರಾದ್ಯಾಪಕರ ಹುದ್ದೆಯನ್ನು ನೀಡುವ ಪದ್ಧತಿ ಇದ್ದು, ಇತ್ತೀಚೆಗೆ ಯು.ಜಿ.ಸಿ ನಿಯಮಗಳಂತೆ ಕಾಲೇಜು ಘಟ್ಟಕ್ಕೂ ಈ ಸೌಲಭ್ಯ ವಿಸ್ತರಿಸಲಾಗಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ ಡಾ.ವಿಜಯಲತ. ಸಿ ಅವರು ಪ್ರೊಫೆಸರ್/ ಗ್ರಂಥಪಾಲಕರು ಆಗಿ ಪದೋನ್ನತಿಯನ್ನು ಹೊಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.









