ವಿರಾಜಪೇಟೆ ಜು.5 : ವಿರಾಜಪೇಟೆ ವಿವೇಕ ಜಾಗೃತ ಬಳಗ, ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆ ತಿತಿಮತಿ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಸದ್ಗತಿ ದಿನದ ಪ್ರಯುಕ್ತ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಚಿತ ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರ ನಡೆಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರುಗಳಾದ ನೇತ್ರ ತಜ್ಞ ಡಾ. ವಿಕ್ರಂ ಮತ್ತು ತಂಡ, ತಾಲೂಕು ಆಸ್ಪತ್ರೆ ವಿರಾಜಪೇಟೆ ವೈದ್ಯರುಗಳಾದ ಡಾ. ಸೌಮ್ಯಶ್ರಿ ಮತ್ತು ಡಾ.ಸತ್ಯಜಿತ್ ರಾಜ್ ತಪಾಸಣೆ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವಾಣಿ, ವಿದ್ಯಾರ್ಥಿಗಳು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ವಿವೇಕ ಜಾಗೃತ ಬಳಗದ ಅಧ್ಯಕ್ಷರಾದ ಶಶಿಕಲಾ ಭಾಸ್ಕರ್, ತಿತಿಮತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಹೆಚ್.ಆರ್. ಷಡಕ್ಷರಿ ಹಾಗೂ ಸರ್ವೋದಯ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಸೂರ್ಯ ಕುಮಾರಿ, ಮುಖ್ಯ ಗ್ರಂಥಪಾಲಕ ಕೆ.ಎಸ್.ರಾಜಶೇಖರ್ ಹಾಜರಿದ್ದರು.
ವಿದ್ಯಾರ್ಥಿಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು. ಇದೇ ಸಂದರ್ಭ ಅನೇಕರು ನೇತ್ರ ದಾನ ಮಾಡಿದರು.









