ಮಡಿಕೇರಿ ಜು. 5 : ಭರವಸೆಯೊಂದಿಗೆ ಅವಕಾಶಗಳನ್ನು ಸಮಥ೯ವಾಗಿ ಬಳಸಿಕೊಂಡು ಜನಸೇವೆಗೆ ಮುಂದಾಗಬೇಕಾದ ಸಂದಭ೯ ಇಂದಿನ ದಿನಗಳಲ್ಲಿದೆ ಎಂದು ರೋಟರಿ ಜಿಲ್ಲೆ 3181 ನ ನಿಯೋಜಿತ ಗವನ೯ರ್ ವಿಕ್ರಂದತ್ತ ಹೇಳಿದ್ದಾರೆ.
ನಗರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ , ಕಾಯ೯ದಶಿ೯ ರತ್ನಾಕರ್ ರೈ ಮತ್ತು ತಂಡಕ್ಕೆ ಪದಗ್ರಹಣ ನೆರವೇರಿಸಿ ಮಾತನಾಡಿದ 2024 -25 ನೇ ರೋಟರಿ ವಷ೯ದ ಗವನ೯ರ್ ವಿಕ್ರಂದತ್ತ, ರೋಟರಿಯಂಥ ಜಾಗತಿಕ ಸಮಾಜಸೇವಾ ಸಂಸ್ಥೆಯ ಬಗ್ಗೆ ಜನರು ಅಪಾರವಾದ ನಂಬಿಕೆ, ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಂಬಿಕೆಗೆ ಚ್ಯುತಿಬಾರದಂತೆ ರೋಟರಿ ಸದಸ್ಯರು ಸಾಕಷ್ಟು ಛಲ, ಭರವಸೆಯೊಂದಿಗೆ ತಮಗಿರುವ ಅವಕಾಶಗಳನ್ನು ಸಮಥ೯ವಾಗಿ ಉಪಯೋಗಿಸಿಕೊಂಡು ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಸಕ್ರಿಯರಾಗುವಂತೆ ಕರೆ ನೀಡಿದರು.
ಎಲ್ಲರೂ ಸ್ವಾಮಿ ವಿವೇಕಾನಂದ, ಮದರೆ ಥೆರೆಸಾ ಅವರಂಥೆ ಮಹಾನ್ ವ್ಯಕ್ತಿಯಾಗಲು ಸಾಧ್ಯವಿಲ್ಲ. ಹೀಗಿದ್ದರೂ ಪ್ರತಿಯೋವ೯ರು ರೋಟರಿಯಂಥ ಬೖಹತ್ ಸಮಾಜ ಸೇವಾ ಸಂಸ್ಥೆಗಳ ಮೂಲಕ ತಮ್ಮ ಕೈಲಾದಷ್ಟು ಸಹಾಯವನ್ನು ಸಮಾಜದಲ್ಲಿ ಅಗತ್ಯವುಳ್ಳವರಿಗೆ ನೀಡಬಹುದಾಗಿದೆ ಎಂದೂ ವಿಕ್ರಂದತ್ತ ಅಭಿಪ್ರಾಯಪಟ್ಟರು. ಯುವಪೀಳಿಗಗೆ ರೋಟರಿಯ ಮಹತ್ವ ಮತ್ತು ಸಮಾಜಸೇವಾ ಕಾಯ೯ಗಳನ್ನು ಪರಿಣಾಮಕಾರಿಯಾಗಿ ತಿಳಿಹೇಳುವ ಮೂಲಕ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸಂಸ್ಥೆಯ ಸದಸ್ಯರಾಗುವಂತೆ ಪ್ರೇರೇಪಿಸಬೇಕು ಎಂದು ಹೇಳಿದ ವಿಕ್ರಂದತ್ತ, ರೋಟರಿ ಮಿಸ್ಟಿ ಹಿಲ್ಸ್ ರೋಟರಿ ಫೌಂಡೇಶನ್ ಗೆ 5 ಸಾವಿರ ಡಾಲರ್ ನೀಡುವ ಮೂಲಕ ಮಹತ್ವದ ಕಾಯ೯ಕೈಗೊಂಡಿದೆ ಎಂದು ಶ್ಲಾಘಿಸಿದರು.
ರೋಟರಿಯ ಸಹಾಯಕ ಗವನ೯ರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ರೋಟರಿ ವಷ೯ದಲ್ಲಿ ಅಂಗನವಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸುವಿಕೆ, ಮಳೆ ನೀರು ಕೊಯ್ಲು, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೋಟರಿಯ ಸದಸ್ಯರೆಲ್ಲರೂ ರೋಟರಿಯ ಮೂಲತತ್ವವಾದ ಭಾವೈಕ್ಯತೆ, ಸೌಹಾಧ೯ತೆಯ ಆಧಾರದಲ್ಲಿ ಒಂದಾಗಿ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್ ಮಿಸ್ಟಿ ಹಿಲ್ಸ್ ನ ವಾತಾ೯ಸಂಚಿಕೆ ರೋಟೋ ಮಿಸ್ಟ್ ನ್ನು ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯಂಥ ಜಾಗತಿಕ ಮಟ್ಟದ ಸೇವಾ ಸಂಸ್ಥೆಯಲ್ಲಿ ಸದಸ್ಯರಾಗಿ ಸಮಾಜಕ್ಕೆ ಕೊಡುಗೆ ನೀಡುವುದೇ ಮಹತ್ವದ ವಿಚಾರ ಎಂದರು.
ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, 18 ವಷ೯ಗಳನ್ನು ಸಮಾಜಸೇವಾ ಚಟುವಟಿಕೆಗಳಲ್ಲಿ ಕಳೆದಿರುವ ಮಿಸ್ಟಿ ಹಿಲ್ಸ್ ನ ಅಧ್ಯಕ್ಷನಾಗಿ 19 ನೇ ವಷ೯ದಲ್ಲಿಯೂ ವಿನೂತನ ಕಾಯ೯ಯೋಜನೆಗಳನ್ನು ಸಮಾಜಕ್ಕೆ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮಿಸ್ಟಿ ಹಿಲ್ಸ್ ನ ನಿಕಟಪೂವ೯ ಅಧ್ಯಕ್ಷ ಪ್ರಸಾದ್ ಗೌಡ, ಕಾಯ೯ದಶಿ೯ ರತ್ನಾಕರ್ ರೈ ವೇದಿಕೆಯಲ್ಲಿದ್ದರು.
ಇದೇ ಸಂದಭ೯ ರೋಟರಿ ಮಿಸ್ಟಿ ಹಿಲ್ಸ್ ನ ವಿಜ್ಞಾನ ವಾಹಿನಿಯ ಈ ವಷ೯ದ ಯೋಜನೆಗೆ ಚಾಲನೆ ನೀಡಲಾಯಿತು. ಅಂತೆಯೇ ಮಡಿಕೇರಿ ನಗರದ ಅಂಗನವಾಡಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಯಿತು.
ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಅನಿಲ್ ಎಚ್.ಟಿ. ಎ.ಕೆ.ಜೀವನ್, ಕೆ.ಡಿ.ದಯಾನಂದ್, ರಶ್ಮಿದೀಪ, ಪ್ರತಿಭಾ ರೈ, ಪಿ.ವಿ. ಅಶೋಕ್ , ಎಂ.ಧನಂಜಯ್, ಹರೀಶ್ ಕುಮಾರ್, ಶಂಕರ್ ಪೂಜಾರಿ ಕಾಯ೯ಕ್ರಮ ನಿವ೯ಹಿಸಿದರು.
ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್ ಅಭಿನ್ ರೈ ಗೆ ಸನ್ಮಾನ :
ಮಿಸ್ಟಿ ಹಿಲ್ಸ್ ನ ನೂತನ ಕಾಯ೯ದಶಿ೯ ರತ್ನಾಕರ್ ರೈ, ನಮಿತಾ ರೈ ದಂಪತಿ ಪುತ್ರ ಅಭಿನ್ ರೈ ಅವರು ರಾಷ್ಟ್ರೀಯ ಮೋಟಾರ್ ರ‍್ಯಾಲಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ವಿಕ್ರಂದತ್ತ ಮತ್ತು ಗಣ್ಯರು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಇತ್ತೀಚಿಗೆ ಅರುಣಾಚಲ ಪ್ರದೇಶದಲ್ಲಿ ಆಯೋಜಿತ ರಾಷ್ಟ್ರೀಯ ಮೋಟಾರ್ ರ್ಯಾಲಿಯ 4 ವಿಭಾಗಗಳಲ್ಲಿ ಅಭಿನ್ ರೈ ಪ್ರಥಮ ಸ್ಥಾನ ಪಡೆದಿದ್ದರು. ಈವರೆಗೆ ಯುವಸಾಧಕ ಅಭಿನ್ ರೈ ಗೆ ಮೋಟಾರ್ ರ‍್ಯಾಲಿ ಸ್ಪಧೆ೯ಗಳಲ್ಲಿ 25 ಪ್ರಥಮ ಸ್ಥಾನ ದೊರಕಿದೆ. ಅಭಿನ್ ರೈ ಸಾಧನೆಯ ಬಗ್ಗೆ ಮಿಸ್ಟಿ ಹಿಲ್ಸ್ ವೋಕೇಷನಲ್ ಸವೀ೯ಸ್ ನಿದೇ೯ಶಕ ಅನಿಲ್ ಎಚ್.ಟಿ. ಪರಿಚಯಿಸಿದರು.