ಮಡಿಕೇರಿ ಜು.7 : ಧಾರಾಕಾರ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಂಟ್ವಾಳದ ಸಜಿಪಮುನ್ನೂರು ಸಮೀಪದ ನಂದಾವರದಲ್ಲಿ ನಡೆದಿದೆ.
ನಂದಾವರ ನಿವಾಸಿ ಮಹಮ್ಮದ್ ಎಂಬುವವರ ಪತ್ನಿ ಝರೀನಾ(46) ಮೃತ ದುರ್ದೈವಿ. ಮಣ್ಣಿನಡಿ ಸಿಲುಕಿದ್ದ ಪುತ್ರಿ ಶಫಾ(20) ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಒಂದು ವಾರದಿಂದ ಬಂಟ್ವಾಳ ಭಾಗದಲ್ಲಿ ಭಾರೀ ಗಾಳಿ, ಮಳೆಯಾಗುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ.








