ಸೋಮವಾರಪೇಟೆ ಜು.7 : ತೋಳೂರುಶೆಟ್ಟಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗಣಪತಿ ಕ್ಲಾತ್ ಎಂಪೋರಿಯಂನ ಮಾಲೀಕ ಡಿ.ಎಸ್.ಕುಮಾರ್ ಟಿ-ಶರ್ಟ್ ಹಾಗೂ ಶಾಲಾ ಸಮವಸ್ತ್ರವನ್ನು ಉಚಿತವಾಗಿ ನೀಡಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಸರಿತಾ, ಶಾಲಾ ಮುಖ್ಯ ಶಿಕ್ಷಕಿ ವಾರಿಜಮಣಿ, ಶಿಕ್ಷಕ ರವಿ, ಚೈತ್ರ, ಎಸ್‍ಡಿಎಂಸಿ ಸದಸ್ಯರಾದ ಪ್ರೇಮ, ಪೋಷಕರಾದ ಶೀಲಾ, ದೇವಿಕ, ಮಂಜುಳ, ಅನಿತ, ಶಿವಕುಮಾರ್, ಸುಬ್ರಮಣಿ, ಗೌರಿ, ಕಾವೇರಿ ಇದ್ದರು.








