ಮಡಿಕೇರಿ ಜು.8 : ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ನಗರದ ಮಡಿಕೇರಿಯ ತಣಲ್ ಸಂಸ್ಥೆಯ ಹಿರಿಯನಾಗರಿಕರಿಗೆ ಸ್ವೆಟರ್ ಹಾಗೂ ಸ್ಕಾರ್ಫ್ ಗಳನ್ನು ವಿತರಿಸಲಾಯಿತು.
ಒಕ್ಕೂಟದ ಹಿರಿಯ ಪ್ರತಿನಿಧಿ ಹಾ.ತಿ. ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 40 ಮಂದಿ ಮಹಿಳೆಯರಿಗೆ ಒಕ್ಕೂಟದ ಪ್ರಮುಖರು ಸ್ವೆಟರ್ ಹಾಗೂ ಸ್ಕಾರ್ಫ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಣಲ್ ಸಂಸ್ಥೆಯ ವಕ್ತಾರ ಮಹಮ್ಮದ್ ಮುಸ್ತಫ , ಮಾನವೀಯ ಸ್ನೇಹಿತರ ಒಕ್ಕೂಟವು ಕಳೆದ ಕೆಲವು ವರ್ಷಗಳಿಂದ ಒಂದು ವಾಟ್ಸಾಪ್ ಗ್ರೂಪನ್ನು ರಚಿಸಿಕೊಂಡು ನೊಂದವರ ಕಣ್ಣೀರು ಒರೆಸುವ ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು . ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಒಕ್ಕೂಟವು ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಒಕ್ಕೂಟದ ಅಡ್ಮಿನ್ಗಳಾದ ಎಂ.ಇ.ಮಹಮ್ಮದ್, ಪಿ.ಪಿ. ಸುಕುಮಾರ್, ಜಾನ್ ಬೆನೆಟ್, ಮನ್ಸೂರ್ ಫರ್ಝ್, ಗಾಯತ್ರಿ ನರಸಿಂಹ, ಹನೀಫ್ ಸೋನಾ, ಪ್ರತಿನಿಧಿಗಳಾದ ಮಾಜಿ ಯೋಧ ಡೇವಿಡ್ ವೇಗಸ್, ಅನಿಲ್ ಕುಮಾರ್, ಲೀಲಾವತಿ ಸೇರಿದಂತೆ ಮತ್ತಿತರು ಹಾಜರಿದ್ದರು.









