ಮಡಿಕೇರಿ ಜು.8 : ಕೇಂದ್ರ ಸರ್ಕಾರ ಜಿಲ್ಲೆಯನ್ನು ಬಜೆಟ್ ನಲ್ಲಿ ನಡೆಸಿಕೊಂಡ ರೀತಿಯೆ ರಾಜ್ಯ ಬಜೆಟ್ ನಲ್ಲಿ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಹೈಟೆಕ್ ಆಸ್ಪತ್ರೆ ಮತ್ತು ಕಾಫಿಗೆ ಬ್ರಾಂಡ್ ಬೆಳೆಸುವುದು ಬಿಟ್ಟರೆ ಬೇರೇನೂ ಇಲ್ಲ. ಜಿಲ್ಲೆಯಲ್ಲಿ ಆಸ್ಪತ್ರೆಗೆ ಅನುದಾನ ಒಳ್ಳೆಯ ಬೆಳವಣಿಗೆ. ಆದರೆ ಪ್ರತಿ ತಾಲೂಕಿಗೆ ಒಂದು ಸುಸಜ್ಜಿತ ಆಸ್ಪತ್ರೆ ಅವಶ್ಯಕತೆ ಇದ್ದು, ಅದನ್ನು ಈಡೇರಿಸಿಲ್ಲ. ಜಿಲ್ಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುದಾನ ಇಲ್ಲ.
ಬಹಳ ವರ್ಷಗಳ ನಂತರ ಕೊಡಗಿನಲ್ಲಿ ಶಾಸಕರ ಬದಲಾವಣೆ ಕಂಡಿದ್ದು, ರಾಜ್ಯ ಸರ್ಕಾರದ ಮೇಲೆ ಜನರು ಬಹಳ ನೀರಿಕ್ಷೆ ಇಟ್ಟಿದ್ದರು. ಆದರೆ ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿಸಿದೆ ಎಂದು ಭೋಜಣ್ಣ ಸೋಮಯ್ಯ ಹೇಳಿದರು.









