ವಿರಾಜಪೇಟೆ ಜು.8 : ವಿದ್ಯಾ ಸಂಸ್ಥೆಗಳಿಂದ ಪಡೆಯುವ ಶಿಕ್ಷಣಕ್ಕೆ ತನ್ನಾದೆಯಾದ ಮೌಲ್ಯಗಳಿವೆ. ವಿದ್ಯಾರ್ಥಿಗಳು ಗೌರವಯುತ ಬದುಕು ಕಟ್ಟಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಸಲಹೆ ನೀಡಿದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಗಿ ಆಗಮಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ್ತ ಸ್ಥಾನಮಾನಗಳನ್ನು ಹೊಂದುತ್ತಾರೆ. ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ ಎಂದರು.
ಕಾವೇರಿ ವಿದ್ಯಾ ಸಂಸ್ಥೆಯು ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ಜಿಲ್ಲೆ ಮತ್ತು ರಾಜ್ಯದಲ್ಲಿ ಉತ್ತಮ ಸಂಸ್ಥೆ ಎಂದು ಹೆಸರುವಾಸಿಯಾಗಿದೆ. ಇಂತಹ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಎಷ್ಟೋ ಮಂದಿ ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ಉನ್ನತ ಪದವಿಯಲ್ಲಿದ್ದಾರೆ. ವಿದ್ಯಾರ್ಥಿ ಜೀವನವು ಕೊನೆಗೊಂಡು ಮುಂದಿನ ಜೀವನದ ನಡೆ ದೇಶದ ಉನ್ನತ್ತಿಗಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾವೇರಿ ಕಾಲೇಜಿನ ಸಂಸ್ಥಾಪಕ ಸದಸ್ಯ ಚೆಕ್ಕೇರ ಕೆ.ಸೋಮಯ್ಯ, 1968 ರ ಹೊಸ್ತಿಲ ದ.ಕೊಡಗಿನಲ್ಲಿ ವಿದ್ಯಾ ಸಂಸ್ಥೆಗಳ ಕೊರತೆ ಕಾಣಿಸಿಕೊಂಡಿತ್ತು. ಅಂದಿನ ಕಾಲಗಟ್ಟದಲ್ಲಿ ವಿದ್ಯಾ ಸಂಸ್ಥೆಯೊಂದನ್ನು ಆರಂಭಿಸುವುದು ಕಠಿಣ ಪರಿಶ್ರಮವಾಗಿತ್ತು. ಅಂದೂ ದೂರದೃಷ್ಟಿ ಹೊಂದಿರುವ ಸಮಾಜ ಹಿತ ಚಿಂತಕರ ಸಹಾಯದಿಂದ ಪ್ರೌಢಶಾಲಾ ಕೊಠಡಿಯಲ್ಲಿ ಕಾವೇರಿ ಕಾಲೇಜು ಉದಯವಾಯಿತು ಎಂದರು.
ಅಂದು ಭಿತ್ತಿದ ಬೀಜವು ಮೊಳಕೆಯೊಡೆದು ಇಂದು ಬೃಹತ್ ಹೆಮ್ಮರವಾಗಿ ಬೆಳೆದು ನಿಂತ್ತಿದೆ. ಅಂದೂ ಪಟ್ಟ ಪರಿಶ್ರಮಕ್ಕೆ ಇಂದು ಫಲ ದೊರಕಿದೆ. ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆದು ಇದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಪ್ರಾಂಶುಪಾಲನಾಗಿ ನಿವೃತ್ತಿ ಹೊಂದಿರುವುದು ಈ ಸಂಸ್ಥೆಗೆ ದೊರಕಿರುವ ಪುಣ್ಯ ಎಂದರು.
ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾಸಂಸ್ಥೆತ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ,
ಅಧ್ಯಕ್ಷ ಪ್ರೂ. ಇಟ್ಟೀರ ಬಿದ್ದಪ್ಪ, ಉನ್ಯಾಸಕರಾದ ಕೆ.ಜಿ.ವೀಣಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾ ಸಂಸ್ಥೆಗಳ ನಿರ್ದೇಶಕ ಎಂ.ಕೆ.ಮೊಣ್ಣಪ್ಪ, ಬುಟ್ಟಿಯಂಡ ಚೆಂಗಪ್ಪ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ ನಾಣಯ್ಯ, ನಿವೃತ್ತ ಕಾಲೇಜಿನ ಪ್ರಾಂಶುಪಾಲರು, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ಹಾಜರಿದ್ದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲ ಡಾ.ಆನಂದ್ ಕಾರ್ಲ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಕಾವೇರಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಸಂಚಾಲಕರಾದ ಬೆನಡಿಕ್ಟ್ ಸಾಲ್ಡಾನ ಸರ್ವರನ್ನು ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಕೌಶಲ್ಯ ವಿಧ್ಯಾರ್ಥಿಗಳಾದ ತೌಸಿಫ್,ಪೂವಮ್ಮ, ಸೋನಿ ಮತ್ತು ದೀವಿಕಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು, ಉಪನ್ಯಾಸಕಿ ಅಂಬಿಕ ಉತ್ತಪ್ಪ ಸರ್ವರನ್ನು ವಂದಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿ : ಕಿಶೋರ್ ಕುಮಾರ್ ಶೆಟ್ಟಿ