ಮಡಿಕೇರಿ ಜು.11 : ಊರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹೋದ ವ್ಯಕ್ತಿ ಕಾಣೆಯಾಗಿರುವುದಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಾಜೆ ಗ್ರಾಮದ ಅರಮನೆತೋಟ ಕಾಲೋನಿ ನಿವಾಸಿ ಮಂಜುನಾಥ (37) ಜು.10 ರಂದು ಮಧ್ಯಾಹ್ನ ಊರದ ಮರಗೋಡು ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ಬಂದಿರುವುದಿಲ್ಲ. ಮನೆಗೆ ಕರೆಮಾಡಿ ವಿಚಾರಿಸಿದಾಗ ಬಂದಿರುವುದಿಲ್ಲ ಎಂಬುದಾಗಿ ತಿಳಿಸಿದ್ದು, ಅಲ್ಲದೆ ಮೊಬೈಲ್ ಫೋನ್ ಸ್ವೀಚ್ ಆಫ್ ಆಗಿದೆ ಎಂದು ಮಂಜುನಾಥ ಅವರ ಪತ್ನಿ ಎಂ.ಎಂ.ಆಶಾ ದೂರಿನಲ್ಲಿ ತಿಳಿಸಿದ್ದಾರೆ.
ಮಂಜುನಾಥ್ ಕನ್ನಡ, ತುಳು, ಮಲಯಾಳ, ಕೊಡವ ಭಾಷೆ ಮಾತನಾಡುವವರಾಗಿದ್ದು, 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಧೃಡಕಾಯ ಶರೀರ ಹೊಂದಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಡಿಕೇರಿ ಪೊಲೀಸ್ ಠಾಣೆ-08272-228777, ಪೊಲೀಸ್ ಅಧೀಕ್ಷಕರು -08272-229000 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.









