
ಕಣಿವೆ ಡಿ.20 NEWS DESK : ಅತ್ತೂರು ಗ್ರಾಮದ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕ್ರಿಸ್ಮಸ್ ಟ್ರೀ, ಗುಡಿಸಲು ಹಾಗೂ ಸಾಂತಾ ಕ್ಲಾಸ್ ಮಾದರಿಗಳನ್ನು ಸಜ್ಜುಗೊಳಿಸಲಾಗಿತ್ತು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲೆ ಸತ್ಯ ಸುಲೋಚನ, ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಆಚರಣೆಗಳ ಮಹತ್ವಗಳನ್ನು ತಿಳಿಯಪಡಿಸುವ ಸಲುವಾಗಿ ಎಲ್ಲಾ ಧರ್ಮಗಳ ಪ್ರಮುಖ ಆಚರಣೆಗಳು, ರಾಷ್ಟ್ರೀಯ ಹಬ್ಬಗಳು ಹಾಗೂ ನಾಡು ಕಟ್ಟಿದ ಮಹನೀಯರ ಸ್ಮರಣೆ ಗಳನ್ನು ಕಾಲ ಕಾಲಕ್ಕೆ ಆಚರಿಸಲಾಗುತ್ತಿದೆ ಎಂದು ಹೇಳಿದರು. ಶಾಲೆಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಹಾಗೂ ಶಾಲಾ ಶಿಕ್ಷಕರಾದ ಭಾವನಾ ಹಾಗೂ ಪ್ರೇಮ ಇದ್ದರು.









