ಸುಂಟಿಕೊಪ್ಪ ಡಿ.18 NEWS DESK : ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದ ಇಮ್ಮಾನುವೇಲ್ ಚರ್ಚ್ ಕ್ರಿಸ್ಮಸ್ ಆಚರಣೆಯ ಅಂಗವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಇಮ್ಮಾನುವೇಲ್ ದೇವಾಲಯ ಹೊರಾಂಗಣವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು, ಒಳಾಂಗಣವನ್ನು ಕ್ರಿಸ್ಮಸ್ ಟ್ರೀ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಇರಿಸಿ ಸಿಂಗರಿಸಲಾಗಿದೆ. ಡಿ.24 ರಿಂದ ಆರಂಭಗೊಳ್ಳಲಿರುವ ಪ್ರಾರ್ಥನೆಯನ್ನು ಇಮ್ಮಾನುವೇಲ್ ದೇವಾಲಯದ ಸುಂಟಿಕೊಪ್ಪ ಸಭಾಪಾಲಕರಾದ ಜೈಸನ್ ಅಯ್ಯ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರ್ಥನೆ-ಆರ್ಶಿವಚನ ನೀಡಲಿದ್ದಾರೆ.











