ಮಡಿಕೇರಿ ಜು.12 : ಡಾ.ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೋಲಾರ್ನ ಕೆಜಿಎಫ್ ನಲ್ಲಿ ನಡೆದ 10km ಕ್ರಾಸ್ ಕಂಟ್ರಿ ಓಟದಲ್ಲಿ ಮೊದಲನೆಯ ಕ್ರಮಾಂಕಿ ಆಗಿ ಗೋಲ್ಡ್ ಮೆಡಲ್ ಪಡೆದು ರಾಷ್ಟ್ರೀಯ ಮಟ್ಟದ ಇಂಟರ್ ಕಾಲೇಜ್ ಆಲ್ ಇಂಡಿಯಾ ಕ್ರಾಸ್ ಕಂಟ್ರಿ ಸ್ಪರ್ಧೆ ಗೆ ಅಂಜೇರಿರ ಟಿಶನ್ ಮಾದಪ್ಪ ಆಯ್ಕೆಯಾಗಿದ್ದಾರೆ.
ಟಿಶನ್ ಮಾದಪ್ಪ ಪ್ರಸುತ್ತ ದ.ಕ ಜಿಲ್ಲೆಯ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು. ಇತ್ತೀಚಿನ ವಿ. ಟಿ.ಯು ಲೆವಲ್ ರಾಜ್ಯ ಮಟ್ಟದ 10 ಕಿ.ಮೀ. ಕ್ರಾಸ್ ಕಂಟ್ರಿ ಓಟದಲ್ಲಿ ಸರಾಸರಿ ಎರಡನೆ ಕ್ರಮ ಅಂಕಿ ಪಡೆದಿದ್ದು, ರಾಷ್ಟ್ರೀಯ ಮಟ್ಟದ ಆಲ್ ಇಂಡಿಯಾ ಅಂತರ ಕಾಲೆಜು ಮಟ್ಟದಲ್ಲಿ ಭಾಗವಹಿಸಿದರು. ಇವರು 2022 ನೇ ಸಾಲಿನ ಚಿಕ್ಕಬಳ್ಳಾಪುರದಲ್ಲಿ ನಡೆದ ವಿ.ಟಿ.ಯು ರಾಜ್ಯ ಮಟ್ಟದ ಅಥ್ಲೆಟಿಕ್ಸ ನಲ್ಲಿ 21ಕಿ.ಮಿ ಹಾಫ್ ಮ್ಯಾರಥಾನ್ ನಲ್ಲಿ ಬ್ರಾನ್ಸ್ ಮಡೆಲ್ ಪಡೆದುಕೊಂಡಿದ್ದಾರೆ.
2023 ನೇ ಸಾಲಿನ ವಿ.ಟಿ.ಯು ರಾಜ್ಯ ಮಟ್ಟದ ಅಂತರ್ ಕಾಲೆಜು ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 5000mtr,ನಲ್ಲಿ ಸಿಲ್ವರ್ ಮಡೆಲ್, 10,000mtr ನಲ್ಲಿ ಸಿಲ್ವರ್ ಮಡೆಲ್, ಹಾಗೂ 21,000 ಕಿ.ಮಿ ಹಾಫ್ ಮ್ಯಾರಥಾನ್ ನಲ್ಲಿ ಸಿಲ್ವರ್ ಮೆಡಲ್ ಪಡೆದುಕೊಂಡಿದ್ದಾರೆ.
ಟಿಶನ್ ಮಾದಪ್ಪ ಕೊಡಗಿನ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಅಂಜೇರಿರ ಧನು ಮತ್ತು ಅಂಜೇರಿರ ಮಾದಪ್ಪ ಅವರ ಪುತ್ರ.