ಮಡಿಕೇರಿ ಜು.13 : ತೆಕ್ಕಿಲ್ ಮಾದರಿ ಶಾಲೆಯಲ್ಲಿ ತರಕಾರಿಗಳ ದಿನವನ್ನು ಆಚರಣೆ ಆಚರಿಸಲಾಯಿತು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ದಿಂದ ಪಾಲ್ಗೊಂಡು ತಂದ ತರಕಾರಿಗಳ ಮಹತ್ವವನ್ನು ವಿವರಿಸಿದರು.
ಶಾಲೆಯ ಸಹ ಶಿಕ್ಷಕಿ ಸೌಮ್ಯ ಮಕ್ಕಳಿಗೆ ಹಲವು ತರಕಾರಿಗಳ ಮಹತ್ವವನ್ನು ತಿಳಿಸಿದರು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯ ಜೆ.ಡಿ.ಸಂಪತ್ ಮತ್ತು ಎಲ್ಲಾ ಶಿಕ್ಷಕ ವೃಂದದವರು ಮತ್ತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಉನೈಸ್ ಪೆರಾಜೆ ಉಪಸ್ಥಿತರಿದ್ದರು.