ಮಡಿಕೇರಿ, NEWS DESK ಅ. 30: ಸೋಮವಾರಪೇಟೆಯಲ್ಲಿ ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ಪ್ರಥಮ ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ನಾಪೋಕ್ಲುವಿನ ಬಿ.ಜಿ. ಕೃತನ್ ಹಾಗೂ ಬೆಟ್ಟಗೇರಿಯ ಸಂದೀಪ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ನಾಪೋಕ್ಲುವಿನ ಗಿರೀಶ್ ಬಿ.ಎಸ್. ಮತ್ತು ಕವಿತಾ ಬಿ.ಜಿ. ದಂಪತಿಯ ಪುತ್ರ ಬಿ.ಜಿ. ಕೃತನ್ ಹಾಗೂ ಬೆಟ್ಟಗೇರಿಯ ಚಂದ್ರಶೇಖರ್ ಮತ್ತು ನಳಿನಿ ದಂಪತಿಯ ಪುತ್ರ ಸಂದೀಪ್ ಅವರು ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುದರ್ಶನ್ ಅವರ ನೇತೃತ್ವದಲ್ಲಿ ನಡೆದ ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಭಾಗಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕೃತನ್ ಹಾಗೂ ಸಂದೀಪ್ ಅವರಿಗೆ ಬೆಟ್ಟಗೇರಿಯ ಕರಾಟೆ ತರಬೇತುದಾರರಾದ ಬಿ.ಎ. ಆನಂದ ಪೂಜಾರಿ ಅವರು ಮಾರ್ಗದರ್ಶನ ನೀಡಿದ್ದರು.

















