ಸಿದ್ದಾಪುರ ಜು.13 : ಸಿದ್ದಾಪುರ ಗ್ರಾಮ ಪಂಚಾಯಿತಿಯ ಗುಹ್ಯ 2ನೇ ವಾರ್ಡ್ ಸದಸ್ಯ ಹಸ್ಸನ್ 137 ಕುಟುಂಬಗಳಿಗೆ ಉಚಿತವಾಗಿ ತನ್ನ ಸ್ವಂತ ಖರ್ಚಿನಲ್ಲಿ ಮನೆ ಮನೆಗೆ ಗೃಹಜ್ಯೋತಿ ಯೋಜನೆಯನ್ನು ಮಾಡಿಕೊಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದಸ್ಯನ ಸಕಾಲದ ಸ್ಪಂದನೆಯಿಂದಾಗಿ ಕೆಲಸ ರಜೆ ಮಾಡಿ ನಾಗರೀಕ ಸೇವಾಕೇಂದ್ರಕ್ಕೆ ಅಲೆದಾಡುವುದು ತಪ್ಪಿದ್ದು, ಸೇವಾಕೇಂದ್ರಗಳಿಗೆ ಖರ್ಚು ಮಾಡಬೇಕಾದ ನೂರಾರು ರೂಪಾಯಿ ಹಣವನ್ನು ತಾವೇ ಭರಿಸಿ ಮಾದರಿಯಾಗಿದ್ದಾರೆ.









