ಸೋಮವಾರಪೇಟೆ ಜು.14 : ಕಕ್ಕೆಹೊಳೆಯ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಜು.17 ರಿಂದ ಭುವನೇಶ್ವರಿ ದೇವಿಗೆ ಆಷಾಢಮಾಸಸದ ದುರ್ಗಾದೀಪ ನಮಸ್ಕಾರ ಪೂಜೆಯು ಒಂದು ತಿಂಗಳು ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಬೆಳಗ್ಗೆ 7ಗಂಟೆಗೆ ಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಅಂದಿನಿಂದ ಸಂಜೆ 6 ರಿಂದ 8ರವರೆಗೆ ಪ್ರಥಮ ದಿನದ ದುರ್ಗಾದೀಪ ನಮಸ್ಕಾರ ಪೂಜೆಯು ನೆಡೆಯಲಿದ್ದು, ರಾತ್ರಿ 8 ಗಂಟೆಯ ನಂತರ ಅನ್ನದಾನ ಏರ್ಪಡಿಸಲಾಗಿದೆ. ಆಷಾಢ ಮಾಸದ ಪೂಜೆಯು ಆ.15ರಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಹೋಮ ಮತ್ತು ಅನ್ನದಾನಗಳು ನಡೆಯಲಿದೆ. ಕೊನೆಯ ದಿವಸದ ಪೂಜೆಯು ಆ.16ರಂದು ಸಂಪನ್ನಗೊಳಲಿದ್ದು, ಅಂದು ಸಂಜೆ 6ಗಂಟೆಯಿಂದ ಶತ್ರುಸಂಹಾರ ಪೂಜೆಯು ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‍ಕುಮಾರ್ ತಿಳಿಸಿದ್ದಾರೆ.