ಮಡಿಕೇರಿ,ಜು.15 : ಮ್ಯಾನ್ಸ್ ಕಾಂಪೌಂಡ್ ಫುಟ್‌ಬಾಲ್ ಕ್ಲಬ್(ಎಂಸಿಸಿ)ನ ಅಧ್ಯಕ್ಷರಾಗಿ ಕ್ರಿಸ್ಟೋಫರ್ ಹಾಗೂ ಕಾರ್ಯದರ್ಶಿಯಾಗಿ ಉಮೇಶ್‌ಕುಮಾರ್ ಪುನರಾಯ್ಕೆಯಾಗಿದ್ದಾರೆ.
ಕ್ಲಬ್‌ನ ಅಧ್ಯಕ್ಷ ಎ.ಎಂ. ಕ್ರಿಸ್ಟೋಫರ್ ನೇತೃತ್ವದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪತ್ರ ಮಂಡನೆ ನಂತರ 2023-24 ರ ಸಾಲಿನ ಕ್ಲಬ್ ನವೀಕರಣ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಕ್ಲಬ್‌ನ ಆಡಳಿತ ಮಂಡಳಿಯಲ್ಲಿ ಕೆಲವೊಂದು ಮಾರ್ಪಡುಗಳ ಜೊತೆಗೆ ಹೊಸ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರಾಗಿ ಎ.ಜೆ ಪೀಟರ್, ಖಜಾಂಜಿಯಾಗಿ ಪ್ರಸನ್ನ, ಸಹಕಾರ್ಯದರ್ಶಿಯಾಗಿ ತೌಶಿಫ್, ಕಾನೂನು ಸಲಹೆಗಾರರಾಗಿ ಸಚಿನ್ ವಾಸುದೇವ್, ದೃಶ್ಯ ಮಾಧ್ಯಮ ವಕ್ತಾರರಾಗಿ ಸುರ್ಜಿತ್, ಪತ್ರಿಕಾ ಮಾಧ್ಯಮ ವಕ್ತರರಾಗಿ ಕುಡೆಕಲ್ ಸಂತೋಷ್, ಜಂಟಿ ಸಹಾಯಕರಾಗಿ ಅಶೋಕ್, ಪ್ರತಿನಿಧಿಯಾಗಿ ದಿನೇಶ್, ಗೌರವ ನಿರ್ದೇಶಕರು ಹಾಗೂ ಸಲಹೆಗಾರರಾಗಿ ಚಿನ್ನಪ್ಪ ಹಾಗೂ ತಂಡದ ಹಿರಿಯ ಆಟಗಾರರನ್ನು ಆಡಳಿತ ಮಂಡಳಿಯ ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು. ತಂಡದ ಆಯ್ಕೆ ಮತ್ತು ನಿರ್ವಹಣೆಯನ್ನು ಸಚಿನ್, ಲೋಹಿತ್ ,ತೌಶಿಫ್ ಇವರಿಗೆ ವಹಿಸಲಾಯಿತು.
ಮುಂದಿನ ದಿನಗಳಲ್ಲಿ ಕ್ಲಬ್‌ನ ವತಿಯಿಂದ ಜಿಲ್ಲಾ, ತಾಲೂಕು, ಶಾಲಾ ಮಟ್ಟದ ಪಂದ್ಯಾಟವನ್ನು ನಡೆಸಲು ತೀರ್ಮಾನಿಸಲಾಯಿತು. ಹೊಸ ಪ್ರತಿಭೆಗಳನ್ನು ಶೋಧಿಸಿ ತರಬೇತಿಯ ಮುಖಾಂತರ ಸದೃಢ ತಂಡ ಕಟ್ಟಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಹಾಜರಿದ್ದ ಸದಸ್ಯರಿಂದ ಹಲವಾರು ಸಲಹೆ ಸೂಚನೆಗಳು ಮೂಡಿಬಂದು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಎಂದು ಕ್ಲಬ್‌ನ ಕಾರ್ಯದರ್ಶಿ ಉಮೇಶ್‌ಕುಮಾರ್ ತಿಳಿಸಿದ್ದಾರೆ.