ಮಡಿಕೇರಿ ಜು.15 : ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಸ್ಪಂದನಾ ಸಭೆಯು ಜು.20 ರಂದು ನಡೆಯಲಿದೆ. ಈ ಸಭೆಯಲ್ಲಿ ಉದ್ದಿಮೆದಾರರ ಸಮಸ್ಯೆಗಳನ್ನು ಚರ್ಚಿಸಲಾಗುವುದು.
ಆದ್ದರಿಂದ ಕೈಗಾರಿಕೆಗಳಲ್ಲಿ ಸಮಸ್ಯೆಗಳಿದ್ದಲ್ಲಿ, ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಈ ಕಾರ್ಯಾಲಯಕ್ಕೆ ಜು.18 ರೊಳಗೆ ಇ-ಮೇಲ್ dicjdkodagu@gmail.com ಮುಖಾಂತರ ಅಥವಾ ಖುದ್ದಾಗಿ ಲಿಖಿತವಾಗಿ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.









