ಕಡಂಗ ಜು.18 : ವಿರಾಜಪೇಟೆ ಜಮಿಯತುಲ್ ನಲ್ಲಿ ಮುಹಲ್ಲಿಮೀನ್ ರೇಂಜ್ ಮಟ್ಟದ ಮುಹ ಲಿಮಿನ್ ಡೇ ಕಡಂಗ ಶಾದಿಮಹಲ್ ಸಭಾಂಗಣದಲ್ಲಿ ನಡೆಯಿತು.
ಜಮಹತ್ ಅಧ್ಯಕ್ಷ ಅಬುಲ್ಲ ಅಧ್ಯಕ್ಷರೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಿ ಪಿ ಎಂ ಬಷೀರ್ ಹಾಜಿ ಉದ್ಘಾಟಿಸಿದರು.
ವಿರಾಜಪೇಟೆ ಖತೀಬ್ ಉಸ್ತಾದ್ ರಹ್ಹೋಫ್ ಹುದವಿ ಮದರಸ ಅಧ್ಯಪಕರ ಸೇವೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಇಸ್ಮಾಯಿಲ್ ಉಸ್ತಾದ್, ಅಹ್ಮದ್ ಹಾಜಿ, ಯೂಸೂಫ್ ಉಸ್ತಾದ್, ಸುಹೈಬ್ ಫೈಜಿ,ಸಲಾಂ, ಅಬ್ದುಲ್ಲ ಹಾಜಿ ಪಾಲ್ಗೊಂಡಿದ್ದರು. ಪ್ರಾರ್ಥನೆ ಯನ್ನು ಅಬೂಬಕರ್ ಮುಸ್ಲಿಯಾರ್ ನೆರವೇರಿಸಿದರು. ಹನೀಫ್ ಫೈಜಿ ಸ್ವಾಗತಿಸಿ, ಸರ್ವರನ್ನು ವಂದಿಸಿದರು.
ವರದಿ : ನೌಫಲ್ ಕಡಂಗ