ಮಡಿಕೇರಿ ಜು.19 : ಸುಮಾರು 5 ಲಕ್ಷ ರೂ. ಮೌಲ್ಯದ ಶುಂಠಿಯನ್ನು ಕಳ್ಳತನ ಮಾಡಿರುವ ಘಟನೆ ಹುಣಸೂರು ತಾಲ್ಲೂಕಿನ ಸಣ್ಣೇನಹಳ್ಳಿಯಲ್ಲಿ ನಡೆದಿದೆ.
ಸಣ್ಣೆನಹಳ್ಳಿಯ ಚಂದ್ರೇಗೌಡ ಮತ್ತಿತರ ರೈತರಿಂದ ಒಟ್ಟು 15 ಎಕರೆ ಜಮೀನನ್ನು ಗುತ್ತಿಗೆ ಪಡೆದ ಚೆನ್ನಸೋಗೆಯ ಪ್ರಸನ್ನಕುಮಾರ್, ಹೊಸಕೋಟೆಯ ಶ್ರೀನಿವಾಸ್ ಹಾಗೂ ದೇವೇಂದ್ರ ಎಂಬುವವರು ಶುಂಠಿ ಬೆಳೆದಿದ್ದರು. ಅರ್ಧ ಏಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಶುಂಠಿಯನ್ನು ರಾತ್ರಿ ವೇಳೆ ಚೋರರು ಕದ್ದೊಯ್ದಿದ್ದಾರೆ. ಶುಂಠಿಗೆ ಉತ್ತಮ ಧಾರಣೆ ಬಂದಿರುವ ಹಿನ್ನೆಲೆ ಕಳ್ಳರು ಶುಂಠಿ ಕಳ್ಳತನಕ್ಕೂ ಮುಂದಾಗಿದ್ದು, ರೈತರಲ್ಲಿ ಆತಂಕ ಮೂಡಿದೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










